Tuesday, March 21, 2023

Latest Posts

ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ರೇ ದಂಡ ಫಿಕ್ಸ್ !

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಟಿಕೆಟ್ ಇಲ್ಲದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಇಲಾಖೆ ಶಾಕ್ ನೀಡಿದೆ. ವಿಶೇಷ ತಪಾಸಣೆ ಕಾರ್ಯಾಚರಣೆ ನಡೆಸುವ ಮೂಲಕ ದಂಡದ ಶಿಕ್ಷೆಯನ್ನು ನೀಡಿದೆ. ಹೀಗಾಗಿ ರೈಲ್ವೆ ಪ್ರಯಾಣಿಕರು ಎಚ್ಚರಿಕೆ ವಹಿಸಬೇಕು.

ಈ ಬಗ್ಗೆ ಮಾಹಿತಿ ನೀಡಿರುವ ನೈರುತ್ಯ ರೈಲ್ವೆ ಇಲಾಖೆ , ರೈಲ್ವೇ ಮಾನ್ಯವಾದ ಟಿಕೆಟ್‌ಗಳು/ಪ್ರಯಾಣ ಮಾಡುವ ಅಧಿಕಾರದೊಂದಿಗೆ ಮಾತ್ರ ರೈಲುಗಳಲ್ಲಿ ಪ್ರಯಾಣಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನಿಯಮಿತ ತಪಾಸಣೆಯ ಹೊರತಾಗಿ ವಿಶೇಷ ಟಿಕೆಟ್ ತಪಾಸಣೆ ಕಾರ್ಯಾಚರಣೆಗಳನ್ನು ಆಯೋಜಿಸುತ್ತದೆ ಎಂದು ತಿಳಿಸಿದೆ.

ವಿಶೇಷ ಟಿಕೆಟ್ ತಪಾಸಣೆ ಕಾರ್ಯಾಚರಣೆಯ ಭಾಗವಾಗಿ ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ಯಾಮ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಮಾ . 16ರಂದು ಬೆಂಗಳೂರು- ಮೈಸೂರು ವಿಭಾಗದಲ್ಲಿ ಹೊಂಚುದಾಳಿ ತಪಾಸಣೆ ಆಯೋಜಿಸಲಾಗಿತ್ತು ಎಂದಿದೆ.

ಈ ದಾಳಿಗೆ 28 ಸಿಬ್ಬಂದಿಯನ್ನು ತಪಾಸಣೆಗಾಗಿ ನಿಯೋಜಿಸಲಾಗಿತ್ತು. ಅಧಿಕೃತ ಟಿಕೆಟ್‌ಗಳಿಲ್ಲದೆ ಮತ್ತು ಕಾಯ್ದಿರಿಸದ ಸಾಮಾನುಗಳೊಂದಿಗೆ ಪ್ರಯಾಣಿಸಿದ 137 ಪ್ರಯಾಣಿಕರನ್ನು ಗುರುತಿಸಿ ಅವರಿಂದ ರೂ.40,360 ದಂಡವನ್ನು ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!