Monday, October 3, 2022

Latest Posts

ಓಣಂ ಸಂಭ್ರಮ: ಒಂದೇ ವಾರದಲ್ಲಿ 625 ಕೋಟಿ ರೂಗಳ ಮದ್ಯ ಮಾರಾಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೇರಳದಲ್ಲಿ ಓಣಂನ ಉತ್ರಾಂ ದಿನದಂದು (ತಿರುವೋಣಂ ಮೊದಲ ದಿನ) ಮದ್ಯ ಮಾರಾಟದಲ್ಲಿ ವಿಶೇಷ ದಾಖಲೆ ಕಂಡಿದೆ.

ಬಿವರೇಜಸ್ ಕಾರ್ಪೊರೇಷನ್ (ಬೆವ್ಕೊ) ಮತ್ತು ಕನ್ಸ್ಯೂಮರ್‌ಫೆಡ್‌ನ ಔಟ್‌ಲೆಟ್‌ಗಳ ಮೂಲಕ 117 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ. ಪೂರಡಂ ದಿನದಂದು ಬೆವ್ಕೋ 104 ಕೋಟಿ ರೂ.ಗಳ ಮದ್ಯ ಮಾರಾಟ ಮಾಡಿದೆ.

ಒಂದು ದಿನದ ಮದ್ಯ ಮಾರಾಟ 100 ಕೋಟಿ ದಾಟಿರುವುದು ಬೆವ್ಕೋ ಇತಿಹಾಸದಲ್ಲಿ ಇದೇ ಮೊದಲು. ಕಳೆದ ವರ್ಷ ಪೂರಾಡಂ ದಿನದಂದು 78 ಕೋಟಿ ರೂ. ಉತ್ರಾಂ ದಿನ 85 ಕೋಟಿ ರೂ.ಗಳ ಮದ್ಯ ಮಾರಾಟವಾಗಿತ್ತು.

ಓಣಂ ಹಬ್ಬದ ಒಂದೇ ವಾರದಲ್ಲಿ ಇಡೀ ರಾಜ್ಯದಲ್ಲಿ 625 ಕೋಟಿ ರೂ.ಗಳ ಮದ್ಯ ಮಾರಾಟವಾಗಿದೆ. ಇದು ರಾಜ್ಯದ ಇತಿಹಾಸದಲ್ಲಿಯೂ ದಾಖಲೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!