Tuesday, September 27, 2022

Latest Posts

ಪತ್ನಿ ಶಾಲಿನಿಗೆ ಹನಿ ಸಿಂಗ್ ವಿಚ್ಛೇದನ: 1 ಕೋಟಿ ರೂ. ಜೀವನಾಂಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ಗಾಯಕ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ವಿಚ್ಛೇದನ ಪಡೆದಿದ್ದು, ಪತ್ನಿಗೆ ಒಂದು ಕೋಟಿ ರೂಪಾಯಿಗಳ ಜೀವನಾಂಶ ನೀಡಲು ಹನಿ ಸಿಂಗ್ ಮುಂದಾಗಿದ್ದಾರೆ .

2011 ರಲ್ಲಿ ದೆಹಲಿಯ ಗುರುದ್ವಾರದಲ್ಲಿ ಇಬ್ಬರೂ ವಿವಾಹವಾಗಿದ್ದರು. ಇದೀಗ 11 ವರ್ಷಗಳ ನಂತರ ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ದೂರವಾಗಿದ್ದಾರೆ.

ಜೀವನಾಂಶ ಚೆಕ್​ ನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯದಲ್ಲಿ ಹಸ್ತಾಂತರಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು 2023ರ ಮಾರ್ಚ್ 22ಕ್ಕೆ ಮುಂದೂಡಲಾಗಿದೆ.

ಶಾಲಿನಿ ಕಳೆದ ವರ್ಷ ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಹನಿ ಸಿಂಗ್​ ವಿರುದ್ಧ ಕೌಟುಂಬಿಕ ದೌರ್ಜನ್ಯ ಆರೋಪ ಮತ್ತು ಇತರ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವಿದೆ ಎಂದು ಶಾಲಿನಿ ಆರೋಪಿಸಿದ್ದರು. ಅಲ್ಲದೇ, ಹನಿ ಸಿಂಗ್‌ಗೆ ವಿಚ್ಛೇದನ ಭತ್ಯೆಗಾಗಿ 10 ಕೋಟಿ ರೂ.ಗಳ ಪರಿಹಾರವನ್ನು ಶಾಲಿನಿ ಕೇಳಿದ್ದರು ಎನ್ನಲಾಗಿದೆ. ಆದರೆ, ಈಗ ಇಬ್ಬರೂ 1 ಕೋಟಿ ಪರಿಹಾರದ ಒಪ್ಪಂದಕ್ಕೆ ಬಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!