ಒಂದು ಕೋಟಿ ಕೊಟ್ಟು ಪಿಎಸ್ಐ ಆದವನು ನೌಕರಿ ಸೇರಿದ ಮರುದಿನವೇ ರಿಕವರಿ: ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ವರದಿ,ಕಲಬುರಗಿ

ಒಳ್ಳೆಯ ಆಡಳಿತ ಕೊಟ್ಟರೆ ಒಳ್ಳೆಯ ಅಭ್ಯರ್ಥಿಗಳು ಆಯ್ಕೆಯಾಗಿ ಬರುವದರಲ್ಲಿ ಸಂದೇಹವೇ ಇಲ್ಲ ಎಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಪಿಎಸ್ಐ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಗೃಹ ಸಚಿವನಿದ್ದಾಗ ಏಳು ಜನರ ಸಮಿತಿ ಮಾಡಿ, ಏಳು ಅಂಕಗಳಿಗಿಂತ ಜಾಸ್ತಿ ಕೊಡಬಾರದು ಎಂದು ಮಾಡಿದ್ದೆ. ಈ ಸಮಿತಿ ಮಾಡಿದ ಪರಿಣಾಮ ನೇಮಕಾತಿಯಲ್ಲಿ ಅವ್ಯವಹಾರ ನಿಲ್ಲಿಸುವುದಕ್ಕೆ ಯಶಸ್ವಿಕೂಡ ಆಗಿದ್ದೇವು ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಇವಾಗ ಕೆಟ್ಟ ಚಾಳಿಗೆ ಮುನ್ನುಡಿ ಬರೆದಿದ್ದಾರೆ. ಒಂದು ಕೋಟಿ ಕೊಟ್ಟು ಪಿಎಸ್ಐ ಗೆ ನೇಮಕಾತಿ ಆದವನು ನೌಕರಿ ಸೇರಿದ ಮರುದಿನವೇ ಅದನ್ನು ರಿಕವರಿ ಮಾಡುವುದಕ್ಕೆ ಮುಂದಾಗುತ್ತಾನೆ ಎಂದರು.

ವಗಾ೯ವಣೆಯಲ್ಲೂ ದುಡ್ಡು ಕೊಟ್ಟರೆ,ವಗಾ೯ವಣೆ ಆಗುವ ವ್ಯವಸ್ಥೆ ಆಗಿದೆ.ಹೀಗಾಗಿ ಆಡಳಿತ ವ್ಯವಸ್ಥೆ ಕೆಟ್ಟು ಹೋಗಿದ್ದು, ಮುಖ್ಯಮಂತ್ರಿ ವ್ಯಯಕ್ತೀಕವಾಗಿ ತಲೆ ಹಾಕಿ ಕೆಲಸ ಮಾಡಬೇಕಾಗಿದೆ ಎಂದರು.

ಇಲ್ಲದೆ ಹೋದರೆ ಕನಾ೯ಟಕದ ಆಡಳಿತ ಕೆಟ್ಟು ಹೋಗಲಿದೆ.ಒಂದು ಕಾಲದಲ್ಲಿ ಕನಾ೯ಟಕದ ಹೆಸರು,ಕನಾ೯ಟಕದ ಪೋಲಿಸ್ ಇಲಾಖೆ ಬಹಳ ಚೆನ್ನಾಗಿತ್ತು. ತೆಲಗಿ ವೀರಪ್ಪನಂತಹ ಕೆಸ್ ಗಳನ್ನು ಡಿಟೆಕ್ಟ್ ಮಾಡಿದೆ,ಆದರೆ ಈಗ ಹೆಸರು ಕೆಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಪೋಲಿಸ್ ಇಲಾಖೆ ಸಂಬಂಧಿಸಿದಂತೆ ಅಕ್ರಮ ಹೊರಬಂದಿದೆ. ನಾಳೆ ಪಿಡಬ್ಲೂಡಿ,ದು ಹೊರಬರುವ ಸಾಧ್ಯತೆ ಇದೆ ಎಂದರು. ಹೀಗೆ ಎಲ್ಲಾ ಇಲಾಖೆಯದ್ದು ಹೊರ ಬಂದರೆ ಪ್ರಾಮಾಣಿಕತೆಗೆ ಎಲ್ಲಿದೆ ನ್ಯಾಯ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಆಡಳಿತ ಸುಧಾರಣೆ ಚೆನ್ನಾಗಿ ಇದ್ದರೆ ಬಡವರಿಗೆ ನ್ಯಾಯ ಸಿಗುತ್ತದೆ. ಇಲ್ಲದೆ ಹೋದರೆ ವಗಾ೯ವಣೆ ಕೊಟ್ಟವರ ಶಿಫಾರಸ್ಸು ಮೇಲೆ ಬಂದರೆ ಅವನು ಹೇಳಿದ ಹಾಗೆ ಕೇಳಿಕೊಂಡು ಇರಬೇಕಾಗುತ್ತದೆ ಎಂದು ಹೇಳಿದರು.

ಪಿಎಸ್ಐ ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ಒಪ್ಪಿಸಿದ್ದಾರೆ.ಎನೆನೂ ಹೊರ ಬರುತ್ತದೆ ನೋಡೋಣ. ಯಾರೇ ತಪ್ಪು ಮಾಡಿದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನನ್ನ ಮನೆಯಲ್ಲಿ ಸಹ ತಪ್ಪು ನಡೆದರೂ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನವರು ತಪ್ಪು ಎಸಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ನ್ಯಾಯಕ್ಕಾಗಿ ಸಿಐಡಿ ಅವರು ನ್ಯಾಯವಾಗಿ ತನಿಖೆ ನಡೆಸಬೇಕು. ಸ್ಟಾಂಪ್ ಪೇಪರ ಹಗರಣದ ಆರೋಪಿ ತೆಲಗಿಯನ್ನು ನಮಾಜ್ ಮಾಡಿ ಹೊರ ಬರುವಾಗ ಅರೆಸ್ಟ್ ಮಾಡಿ ಕರೆತಂದಿದ್ದಾರೆ ಎಂದು ಹೇಳಿ ಪರೋಕ್ಷವಾಗಿ ದಿವ್ಯಾ ಹಾಗರಗಿಯನ್ನು ಬಂಧನ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!