Sunday, December 3, 2023

Latest Posts

BIG| ಸ್ಪೋಟಗಳಿಂದ ರಕ್ತಸಿಕ್ತವಾದ ಪ್ರಾರ್ಥನಾ ಸಭೆ: ಓರ್ವ ಸಾವು, ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯಲ್ಲಿ ಸ್ಫೋಟ ಸಂಭವಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಇಂದು ಬೆಳಗ್ಗೆ ಸಂಭವಿಸಿದ ಸ್ಪೋಟಗಳು ಪ್ರಾರ್ಥನಾ ಸಭೆಯನ್ನು ರಕ್ತಸಿಕ್ತವಾಗಿ ಮಾಡಿತು.

ಕೊಚ್ಚಿಯ ಕಲಮಸ್ಸೆರಿ ಪ್ರದೇಶದಲ್ಲಿ ಮೊದಲ ಸ್ಫೋಟವು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಸಂಭವಿಸಿತು. ನಂತರದ ಒಂದು ಗಂಟೆಯಲ್ಲಿ ಅನೇಕ ಸ್ಫೋಟಗಳು ಒಂದರ ಹಿಂದೆ ಒಂದು ಸಂಭವಿಸಿದವು ಎಂದು ಕಲಮಸ್ಸೆರಿ ಸಿಐ ವಿಬಿನ್ ದಾಸ್ ಹೇಳಿದರು.

ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಅಕ್ಟೋಬರ್ 27ರಂದು ಆರಂಭವಾದ ಮೂರು ದಿನಗಳ ಸಭೆ ಇಂದು (ಭಾನುವಾರ) ಕೊನೆಯ ದಿನವಾಗಿತ್ತು.

ಅಧಿಕಾರಿಗಳ ಪ್ರಕಾರ, ಸ್ಫೋಟ ಸಂಭವಿಸಿದಾಗ 2,000 ಕ್ಕೂ ಹೆಚ್ಚು ಜನರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಘಟನಾ ಸ್ಥಳದಲ್ಲಿ ಪೊಲೀಸರ ಸರ್ಪಗಾವಲಿದ್ದು, ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!