ರಜೆಯಲ್ಲಿರೋ ಸಹೋದ್ಯೋಗಿಗೆ ಕರೆ ಮಾಡಿದ್ರೆ ಬೀಳುತ್ತೆ 1 ಲಕ್ಷ ದಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇದೇನಪ್ಪಾ ಹೊಸ ವಿಷ್ಯಾ…ರಜೆಯಲ್ಲಿರೋ ಸಹೋದ್ಯೋಗಿಗೆ ಕರೆ ಮಾಡಿದ್ರೆ ದಂಡ ಹಾಕ್ತಾರಾ ಅಂತಿದಿರಾ ? ಹೌದು ವಿಷಯ ಇದೆ. ಒಬ್ಬ ಉದ್ಯೋಗಿಯು ಕೆಲಸಕ್ಕೆ ವಿರಾಮ ಬೇಕೆಂದೇ ರಜೆ ತೆಗೆದುಕೊಳ್ಳುವಾಗ, ಅವರಿಗೆ ಕೆಲಸದ ನಿಮಿತ್ತ ಕರೆ ಮಾಡಿದರೆ ಕಂಪನಿಯೊಂದು ದಂಡ ಹಾಕುವುದಾಗಿ ಹೇಳಿದೆ.

ಮುಂಬೈ ಮೂಲದ ಆನ್‌ಲೈನ್‌ ಫ್ಯಾಂಟಸಿ ಗೇಮ್‌ ಸಂಸ್ಥೆ ʼಡ್ರೀಮ್‌ 11′ ಈ ನಿಯಮವನ್ನು ಜಾರಿಗೆ ತಂದಿದೆ. ರಜೆಯಲ್ಲಿರುವ ಸಹೋದ್ಯೋಗಿಗೆ ಕೆಲಸದ ನಿಮಿತ್ತ ಸಂಪರ್ಕಿಸಿದರೆ ಒಂದು ಲಕ್ಷ ದಂಡ ಹಾಕಲಾಗುವುದು ಎಂದು ಕಂಪನಿಯ ಸಹ ಸಂಸ್ಥಾಪಕ ಭವಿತ್‌ ಸೇತ್‌ ಖಾಸಗಿ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಾರೆ.

ವರ್ಷದಲ್ಲೊಮ್ಮೆ ಉದ್ಯೋಗಿಗಳಿಗೆ ಒಂದು ವಾರಗಳ ರಜೆ ನೀಡಲಾಗುತ್ತದೆ. ಈ ಸಮಯದಲ್ಲಿ ಅವರು ಆನಂದದಿಂದ ಇರಬೇಕು ಹಾಗಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!