ಪ್ಲಾಸ್ಟಿಕ್ ವೇಸ್ಟ್ ಕೊಟ್ರೆ ಲೀಟರ್ ಪೆಟ್ರೋಲ್ ನಲ್ಲಿ ಒಂದು ರುಪಾಯಿ ಡಿಸ್ಕೌಂಟ್!!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ಲಾಸ್ಟಿಕ್ ಬಾಧೆಯಿಂದ ಜಗತ್ತು ತತ್ತರಿಸಿರುವ ಇಂದಿನ ದಿನಗಳಲ್ಲಿ ರಾಜಸ್ಥಾನದ ಭಿಲ್ವಾರದಿಂದ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ!ಇಲ್ಲಿನ ಪೆಟ್ರೋಲ್ ಬಂಕ್ ವೊಂದರಲ್ಲಿ ಒಂದು ಲೀಟರ್ ಹಾಲಿನ ಪೌಚ್ ಅಥವಾ ಅರ್ಧ ಲೀಟರ್‌ನ ಎರಡು ಪೌಚ್‌ಗಳು ಅಥವಾ ಒಂದು ಲೀಟರ್ ನೀರಿನ ಬಾಟಲಿಯನ್ನು ತಂದರೆ ಪ್ರತಿ ಲೀಟರ್ ಪೆಟ್ರೋಲ್‌ಗೆ 1 ರೂಪಾಯಿ, ಡೀಸೆಲ್‌ಗೆ 50 ಪೈಸೆ ರಿಯಾಯಿತಿ ಸಿಗುತ್ತಿದೆ!

ಭಿಲ್ವಾರದ ಚಿತ್ತೋರ್ ರಸ್ತೆಯಲ್ಲಿರುವ ಛಗನ್‌ಲಾಲ್ ಬಗ್ತವರ್ಮಾಲ್ ಪೆಟ್ರೋಲ್ ಪಂಪ್‌ನ ಮಾಲೀಕ ಅಶೋಕ್ ಕುಮಾರ್ ಮುಂದ್ರಾ, ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ವಿನೂತನ ಆಫರ್ ಜನರ ಮುಂದಿಟ್ಟಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಗ್ರಾಹಕರು ತರುವ ಪೌಚ್‌ಗಳನ್ನು ಪೆಟ್ರೋಲ್ ಬಂಕ್ ನಲ್ಲಿ ಸಂಗ್ರಹಿಸಲಾಗುತ್ತದೆ. ಬಳಿಕ ಅದನ್ನು ವಿಲೇ ಮಾಡಲು ಸರಸ್ ಡೈರಿಗೆ ನೀಡಲಾಗುವುದು ಎಂದಿದ್ದಾರೆ. ಭಿಲ್ವಾರಾವನ್ನು ಪ್ಲಾಸ್ಟಿಕ್ ಮುಕ್ತ ನಗರವಾಗಿ ನೋಡಲು ನಾನು ಬಯಸಿದ್ದೇನೆ. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾತ್ರವಲ್ಲ, ಪ್ರಾಣಿಗಳಿಗೆ, ಹಸುಗಳಿಗೆ ಅಪಾಯಕಾರಿಯಾಗುತ್ತಿದೆ. ಮುಂದಿನ ಆರು ತಿಂಗಳು ಈ ಯೋಜನೆ ಮುಂದುವರಿಯಲಿದೆ ಎಂದು ಅವರು ಘೋಷಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!