ದೇಶದಲ್ಲಿನ ನಿರುದ್ಯೋಗ ಪಾಕಿಸ್ತಾನ, ಶ್ರೀಲಂಕಾಗಿಂತಲೂ ದಯನೀಯ ಸ್ಥಿತಿ: ರಾಗಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಂದ್ರದ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಕಿಡಿಕಾರಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಈಗ ಪಾಕಿಸ್ತಾನ, ಶ್ರೀಲಂಕಾಗಿಂತಲೂ ಕೆಟ್ಟ ಸ್ಥಿತಿಯಲ್ಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ದೇಶ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮದಲ್ಲಿರುವಾಗಲೇ ಜಾಗತಿಕ ನಿರುದ್ಯೋಗದ ಸೂಚ್ಯಂಕ ಮರು ಪ್ರಕಟಗೊಂಡಿದೆ. ದೇಶದ ನಿರುದ್ಯೋಗ ಪ್ರಮಾಣ ದಯನೀಯ ಸ್ಥಿತಿಗೆ ತಲುಪಿದೆ ಎಂದು ಅವರು ಬರೆದುಕೊಂಡಿದ್ದಾರೆ.

15 ರಿಂದ 24 ವರ್ಷದೊಳಗಿನ ನಿರುದ್ಯೋಗದ ಪ್ರಮಾಣ ಜಪಾನ್‍ನಲ್ಲಿ ಶೇ.4.4ರಷ್ಟಿದ್ದರೆ, ಜರ್ಮನಿಯಲ್ಲಿ ಶೇ.6.9ರಷ್ಟಿದೆ, ಇಸ್ರೇಲ್‍ನಲ್ಲಿ ಶೇ.8.8, ಪಾಕಿಸ್ತಾನದಲ್ಲಿ 9.4, ನೇಪಾಳದಲ್ಲಿ ಶೇ.9.5, ಅಮೆರಿಕಾದಲ್ಲಿ ಶೇ.9.6, ಶ್ರೀಲಂಕಾದಲ್ಲಿ ಶೇ.26.1ರಷ್ಟಿದ್ದರೆ, ಭಾರತದಲ್ಲಿ ಶೇ.28.3ರಷ್ಟು ನಿರುದ್ಯೋಗ ಪ್ರಮಾಣ ಇದೆ ಎಂದು ಅವರು ಟೀಕಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!