VIRAL VIDEO| ಒಂದು ಹಾಡು, ಏಳು ಭಾಷೆ..ಸಿಖ್‌ ಯುವಕನ ಗಾನಕ್ಕೆ ತಲೆದೂಗಿದ ಆನಂದ್‌ ಮಹೀಂದ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಂದೇ ಹಾಡು ಏಳು ಭಾಷೆಯಲ್ಲಿ ಸಿಖ್‌ ಯುವಕನೊಬ್ಬ ಹಾಡಿರುವ ಹಾಡು ಇದೀಗ ಸಖತ್‌ ವೈರಲ್‌ ಆಗುತ್ತಿದೆ. ವಿವಿಧತೆಯಲ್ಲಿ ಭಾರತದ ಏಕತೆ, ಶ್ರೀಮಂತ ಪರಂಪರೆಯನ್ನು ಅದ್ಭುತವಾಗಿ ಅನ್ವೇಷಿಸುವ ಗೀತೆಯಾಗಿ ಮೈಲ್ ಸುರ್ ತೇರಾ ಹಮಾರಾ ಹೆಸರು ಮಾಡಿದೆ. 90 ರ ದಶಕದಲ್ಲಿ ದೂರದರ್ಶನದಲ್ಲಿ ಆಗಾಗ್ಗೆ ಕಾಣಿಸಿಕೊಂಡ ಈ ಹಾಡಿನಲ್ಲಿ ಭಾರತದ ವಿವಿಧ ಭಾಷೆಗಳು ಕೇಳಿಬರುತ್ತವೆ. ಅದೇ ರೀತಿಯಲ್ಲಿ ಸಿಖ್ ಯುವಕ ಹಾಡಿರುವ ಮತ್ತೊಂದು ಹಾಡು ಕೂಡ ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಪಾತ್ರವಾಗಿದೆ.

ಬ್ರಹ್ಮಾಸ್ತ್ರ ಚಿತ್ರದ ಕೇಸರಿಯಾ ಹಾಡನ್ನು @SnehdeepSK ಎಂಬ ಯುವಕ ಏಳು ಭಾಷೆಗಳಲ್ಲಿ ಹಾಡಿದ್ದಾನೆ. ಮಲಯಾಳಂ, ತಮಿಳು, ಕನ್ನಡ, ತೆಲುಗು, ಗುಜರಾತಿ, ಪಂಜಾಬ್ ಮತ್ತು ಹಿಂದಿ ಭಾಷೆಗಳಲ್ಲಿ ಹಾಡಿರುವ ಈ ಹಾಡಿನ ವೀಡಿಯೋ ಸದ್ಯ ನೆಟ್ಟಿಗರ ಮನ ಮುಟ್ಟುತ್ತಿದೆ. ಈ ಮಧುರವಾದ ಹಾಡಿಗೆ ಆನಂದ್‌ ಮಹೀಂದ್ರಾ ಕೂಡ ತಲೆಬಾಗಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!