8ನೇ ದಿನ ಕೇವಲ 20 ಟಿಕೆಟ್‌ ಮಾತ್ರ ಸೇಲ್: ನೆಲಕಚ್ಚಿದ ‘ಧಾಕಡ್’!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅಭಿನಯಿಸಿರುವ ‘ಧಾಕಡ್’ ಸಿನಿಮಾ ಬಿಡುಗಡೆಗೂ ಮುನ್ನ ಸಖತ್​ ಸೌಂಡ್​ ಮಾಡಿತ್ತಾದರೂ, ದುರಾದೃಷ್ಟವಶಾತ್​ ಬಾಕ್ಸ್ ಆಫೀಸ್​ನಲ್ಲಿ ಗಳಿಕೆಯಿಲ್ಲದೇ ಸಂಪೂರ್ಣ ನೆಲಕಚ್ಚಿದೆ.
ಬಿಡುಗಡೆಯಾದ ಎಂಟನೇ ದಿನದಲ್ಲಿ ದೇಶಾದ್ಯಂತ ಕೇವಲ 20 ಟಿಕೆಟ್​ಗಳಷ್ಟೇ ಮಾರಾಟವಾಗುವ ಮೂಲಕ, ಬಾಕ್ಸ್​ ಆಫೀಸ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದೆ.
ಮೇ 20 ರಂದು ‘ಧಾಕಡ್’ ಚಿತ್ರ ತೆರೆಕಂಡಿತ್ತು, ಬಿಡುಗಡೆಯಾದ ಎರಡನೇ ದಿನಕ್ಕೆ ಚಿತ್ರ ಬಾಕ್ಸ್​ ಆಫೀಸ್​ ಗಳಿಕೆ ಇಳಿಕೆ ಕಂಡಿತ್ತು. ಈಗ ಎರಡನೇ ಶುಕ್ರವಾರದ ಕಲೆಕ್ಷನ್​ ಕಂಗನಾ ಚಿತ್ರದ ಮತ್ತಷ್ಟು ಸೊಲು ಕಂಡಿದೆ. ಚಿತ್ರ ಬಿಡುಗಡೆಯಾದ ಎಂಟನೇ ದಿನಕ್ಕೆ ದೇಶದಾದ್ಯಂತ ಕೇವಲ 20 ಟಿಕೆಟ್‌ಗಳು ಮಾತ್ರ ಮಾರಾಟವಾಗಿದ್ದು, ಒಟ್ಟು 4,420 ರೂ. ಕಲೆಕ್ಷನ್​ ಮಾಡಿದೆ.
100 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬರೋಬ್ಬರಿ 3 ಕೋಟಿಯಷ್ಟೇ ಗಳಿಸಿದೆ. ದೇಶಾದ್ಯಂತ 25 ಚಿತ್ರಮಂದಿರಗಳಲ್ಲಿ 2100 ಸ್ಕ್ರೀನ್‌ಗಳಲ್ಲಿ ಚಿತ್ರ ಓಡುತ್ತಿತ್ತು. ಇದೀಗ ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿರುವ ಕಾರಣ ಸಿನಿಮಾವನ್ನು ಥಿಯೇಟರ್​ಗಳಿಂದ ತೆಗೆಯಲಾಗುತ್ತಿದೆ. ಮುಂಬೈನ ಯಾವುದೇ ಚಿತ್ರಮಂದಿರದಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿಲ್ಲ ಎನ್ನುವುದೇ ಅಚ್ಷರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!