ಬೆಲೆ ಹೆಚ್ಚಿಸಲು ತೈಲೋತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿದ ಒಪೆಕ್‌ ರಾಷ್ಟ್ರಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಾಗತಿಕವಾಗಿ ತೈಲ ರಫ್ತು ಮಾಡುವ ಒಪೆಕ್‌ ರಾಷ್ಟ್ರಗಳು ಕುಸಿಯುತ್ತಿರುವ ತೈಲಬೆಲೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದು ತೈಲ ಉತ್ಪಾದನೆಯನ್ನು ತೀವ್ರವಾಗಿ ಕಡಿತಗೊಳಿಸಲು ನಿರ್ಧರಿಸಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ ದಿನವೊಂದಕ್ಕೆ 2 ಮಿಲಿಯನ್ ಬ್ಯಾರೆಲ್‌ಗಳಷ್ಟು ತೈಲೋತ್ಪಾದನೆ ಕಡಿತವಾಗಲಿದೆ. ಇದು ಜಾಗತಿಕ ಆರ್ಥಿಕತೆಗೆ ಹೊಡೆತ ನೀಡಬಹುದು ಎನ್ನಲಾಗಿದೆ.

ಬುಧವಾರ OPEC ತೈಲ ಕಾರ್ಟೆಲ್‌ನ ವಿಯೆನ್ನಾ ಪ್ರಧಾನ ಕಛೇರಿಯಲ್ಲಿ ನಡೆದ ಇಂಧನ ಮಂತ್ರಿಗಳ ಮುಖಾಮುಖಿ ಸಭೆಯಲ್ಲಿ ಉತ್ಪಾದನೆ ಕಡಿತಗೊಳಿಸುವ ನಿರ್ಧಾರವನ್ನು ಅಂಗೀಕರಿಸಲಾಗಿದ್ದು ಈ ನಿರ್ಧಾರವು “ಜಾಗತಿಕ ಆರ್ಥಿಕ ಮತ್ತು ತೈಲ ಮಾರುಕಟ್ಟೆಯ ದೃಷ್ಟಿಕೋನಗಳನ್ನು ಸುತ್ತುವರೆದಿರುವ ಅನಿಶ್ಚಿತತೆಯ” ಮೇಲೆ ಆಧಾರಿತವಾಗಿದೆ ಎಂದು ಗುಂಪು ಹೇಳಿದೆ. “ನಾವು ಮಧ್ಯಮ ಶಕ್ತಿಯಾಗಿ ಉಳಿಯಲು, ಸ್ಥಿರತೆಯನ್ನು ತರಲು ಇಲ್ಲಿದ್ದೇವೆ” ಎಂದು ಗುಂಪು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ಆದರೆ ಒಪೆಕ್‌ ರಾಷ್ಟ್ರಗಳ ಈ ನಿರ್ಧಾರವು ರಷ್ಯಾದ ಪಾಲಿಗೆ ಅನುಕೂಲ ಮಾಡಿಕೊಡಲಿದೆ. ಈ ಹಿಂದೆ ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣವನ್ನು ಖಂಡಿಸಿ ಯುರೋಪಿಯನ್‌ ಒಕ್ಕೂಟವು ರಷ್ಯಾದ ತೈಲಕ್ಕೆ ಬೆಲೆಮಿತಿಯನ್ನು ಅನುಮೋದಿಸಿತ್ತು. ಆದರೆ ಪ್ರಸ್ತುತ ತೈಲ ಮಾರುಕಟ್ಟೆಯಲ್ಲಿ ಬೇಡಿಕೆಯು ಹೆಚ್ಚಿರುವುದರಿಂದ ಮತ್ತು ಒಪೆಕ್‌ ರಾಷ್ಟ್ರಗಳಿಂದ ಕಡಿಮೆ ಪೂರೈಕೆಯಾಗಲಿರುವುದರಿಂದ ರಷ್ಯಾದ ತೈಲೋದ್ಯಮದ ಪಾಲಿಗೆ ಇದು ವರದಾನವಾಗಿ ಪರಿಣಮಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!