ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪರೇಷನ್ ಅಜಯ್ ಕಾರ್ಯಾಚರಣೆಯ ಭಾಗವಾಗಿ ಇಸ್ರೇಲ್‌ನಿಂದ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ದೆಹಲಿಗೆ ಆಗಮಿಸಿದೆ.
ಇಂದು ಬೆಳಗ್ಗೆ 197 ಭಾರತೀಯ ಪ್ರಜೆಗಳನ್ನು ಹೊತ್ತ ಮೂರನೇ ವಿಮಾನ ರಾಷ್ಟ್ರ ರಾಜಧಾನಿಗೆ ತಲುಪಿತ್ತು.
ಇದೀಗ 274 ಪ್ರಯಾಣಿಕರನ್ನು ಹೊತ್ತ ನಾಲ್ಕನೇ ವಿಮಾನವು ಇಸ್ರೇಲ್‌ನಿಂದ ಭಾರತಕ್ಕೆ ಆಗಮಿಸಿದೆ. ಇಂದು ಒಂದೇ ದಿನದಲ್ಲಿಇಸ್ರೇಲ್‌ನಿಂದ ಭಾರತಕ್ಕೆ ತಲುಪಿದ ಎರಡನೇ ವಿಮಾನ ಇದಾಗಿದೆ.
ಈ ಕುರಿತು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಟ್ವೀಟ್ ಮಾಡಿದ್ದು, ಆಪರೇಷನ್ ಅಜಯ್ ಭಾಗವಾಗಿ 274 ಪ್ರಯಾಣಿಕರನ್ನು ಹೊತ್ತ ವಿಮಾನ ಟೆಲ್ ಅವಿವ್ ನಿಂದ ಹೊರಟಿದೆ ಎಂದು ಬರೆದುಕೊಂಡಿದ್ದು, ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.
2nd flight of the day departs from Tel Aviv carrying 274 passengers. pic.twitter.com/UeRQGhamuN
— Dr. S. Jaishankar (@DrSJaishankar) October 14, 2023