ತಿರುಮಲ ಬೆಟ್ಟದಲ್ಲೂ ನವರಾತ್ರಿ ಸಂಭ್ರಮ ಜೋರು: ಟಿಟಿಡಿಯಿಂದ ಅದ್ದೂರಿ ವ್ಯವಸ್ಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಿರುಮಲ ಶ್ರೀವಾರಿ ನವರಾತ್ರಿ ಬ್ರಹ್ಮೋತ್ಸವಕ್ಕೆ ಸಕಲ ಸಿದ್ಧತೆ ನಡೆದಿದೆ. ಭಾನುವಾರದಿಂದ ಬ್ರಹ್ಮೋತ್ಸವ ಆರಂಭವಾಗಲಿರುವುದರಿಂದ ಶಾಸ್ತ್ರೋಕ್ತವಾಗಿ ಅಂಕುರಾರ್ಪಣೆ ಸೇವಾ ಕಾರ್ಯ ನಡೆದಿದೆ. ಶ್ರೀವಾರಿ ಸರ್ವ ಸೇನಾಧಿಪತಿ ವಿಶ್ವಕ್ ಸೇನು ದೇವಸ್ಥಾನದ ರಾಜಬೀದಿಗಳಲ್ಲಿ ಅಂಕುರಾರ್ಪಣೆ ಮೆರವಣಿಗೆ ನಡೆಸಿದರು.

ತಿರುಮಲ ತಿರುಪತಿ ದೇವಸ್ಥಾನವು ನವರಾತ್ರಿ ಬ್ರಹ್ಮೋತ್ಸವಕ್ಕೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿಸ್ತೃತ ವ್ಯವಸ್ಥೆಯನ್ನು ಮಾಡಿದೆ. ಬ್ರಹ್ಮೋತ್ಸವವು ಇಂದು (ಭಾನುವಾರ) ಆರಂಭಗೊಂಡು ಅಕ್ಟೋಬರ್ 23 ರಂದು ಚಕ್ರಸ್ನಾನದೊಂದಿಗೆ ಕೊನೆಗೊಳ್ಳುತ್ತದೆ. ಮೊದಲ ದಿನ ಬೆಳಗ್ಗೆ ಚಿನ್ನದ ತಿರುಚಿ ಹಾಗೂ ರಾತ್ರಿ ದೊಡ್ಡಶೇಷ ವಾಹನದಲ್ಲಿ ಶ್ರೀನಿವಾಸ ಭಕ್ತರಿಗೆ ದರುಶನ ನೀಡಲಿದ್ದಾನೆ.

ಅಕ್ಟೋಬರ್ 16ರಂದು ಬೆಳಗ್ಗೆ ಚಿಕ್ಕ ಶೇಷವಾಹನ ಹಾಗೂ ರಾತ್ರಿ ಹಂಸ ವಾಹನ, ಅಕ್ಟೋಬರ್ 17ರಂದು ಬೆಳಗ್ಗೆ ಸಿಂಹವಾಹನ, ರಾತ್ರಿ ಮುತಿನ ಅಲಂಕಾರ ವಾಹನ ಸೇವೆ ನಡೆಯಲಿದೆ. 19 ರಂದು ಮೋಹಿನಿ ಅವತಾರ ಮತ್ತು ರಥ ಸ್ವಾಮಿಗೆ ಗರುಡ ಉತ್ಸವ ನಡೆಯಲಿದೆ. ಈ ಬಾರಿ ಗರುಡೋತ್ಸವ ಸಂಜೆ 6.30ಕ್ಕೆ ಆರಂಭವಾಗಲಿದೆ.

20ರಂದು ಬೆಳಗ್ಗೆ ಹನುಮ ವಾಹನದಲ್ಲಿ, ಸಂಜೆ 4ರಿಂದ 5ರವರೆಗೆ ಪುಷ್ಪಕ ವಿಮಾನದಲ್ಲಿ ಹಾಗೂ ರಾತ್ರಿ ಗಜ ವಾಹನದಲ್ಲಿ ಶ್ರೀವಾರು ದುರಶನ ನೀಡಲಿದ್ದಾರೆ. 21ರಂದು ಬೆಳಗ್ಗೆ ಸೂರ್ಯಪ್ರಭೆ, ರಾತ್ರಿ ಚಂದ್ರಪ್ರಭೆ ನಡೆಯಲಿದೆ. 22ರಂದು ಬೆಳಗ್ಗೆ ಸ್ವರ್ಣ ರಥ ಹಾಗೂ ರಾತ್ರಿ ಅಶ್ವವಾಹನ ಸೇವೆ ನಡೆಯಲಿದೆ. ಅಕ್ಟೋಬರ್ 23 ರಂದು ಚಕ್ರ ಸ್ನಾನದೊಂದಿಗೆ ಬ್ರಹ್ಮೋತ್ಸವವು ಮುಕ್ತಾಯವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!