ಆಪರೇಷನ್ ಹಸ್ತ: ಸುಳಿವು ನೀಡಿದ ಸಲೀಂ ಅಹ್ಮದ್

ಹೊಸದಿಗಂತ ವರದಿ ಹಾವೇರಿ:

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಹೊಸ ಬಾಂಬ್ ಸಿಡಿಸಿದ್ದು, ಆಪರೇಷನ್ ಹಸ್ತದ ಸುಳಿವು ನೀಡಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗಾವಿ ಅಧಿವೇಶನದ ಬಳಿಕ ಇದಕ್ಕೆ ಚಾಲನೆ ಸಿಗಬಹುದು.
ಕಾಂಗ್ರೆಸ್ ಸೇರಲು ಹಲವಾರು ಬಿಜೆಪಿ ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ.
ಹಲವು ಶಾಸಕರು‌ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದರು.

ಬೆಳಗಾವಿ ಅಧಿವೇಶನದ ಬಳಿಕ ಸಾಕಷ್ಟು ಜನರು ಕೈ ಸೇರಲಿದ್ದಾರೆ. ಸೂಕ್ತ‌ ಸಮಯದಲ್ಲಿ ಅದನ್ನ ಹೇಳುತ್ತೇವೆ. ಬಿಜೆಪಿಯ ಪಾಪದ ಕೊಡ ತುಂಬಿದೆ. ಅದಕ್ಕೆಂದೆ ಕಾಂಗ್ರೆಸ್ ಗೆ ಜನರು ಆಶೀರ್ವಾದ ಮಾಡಿದ್ದಾರೆ. ಕಾಂಗ್ರೆಸ್ ಶಾಸಕರು ಬಿಜೆಪಿ ಹೋಗುತ್ತಾರೆ ಎಂಬುದು ಹಗಲುಗನಸು ಮಾತ್ರ.

ನಮಗೆ ಆಪರೇಷನ್ ಹಸ್ತ ಮಾಡಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ನಿಂದ ನೊಂದು ಹಲವರು ಕಾಂಗ್ರೆಸ್ ಸೇರಲು ಆಸೆ ಪಟ್ಟಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!