ಆಪರೇಷನ್​ ಸಿಂಧೂರ ಎಫೆಕ್ಟ್: PBKS MI ಮ್ಯಾಚ್ ಸ್ಥಳಾಂತರ ಮಾಡಿದ ಬಿಸಿಸಿಐ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್​ ಸಿಂಧೂರ ಕಾರ್ಯಾಚಾರಣೆ ಬಳಿಕ ಪಾಕಿಸ್ತಾನದಿಂದ ಗಡಿ ಭಾಗದ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನ ನಡೆದಿದೆ. ಈ ಯತ್ನಗಳನ್ನ ಭಾರತೀಯ ವಾಯುಪಡೆ ವಿಫಲಗೊಳಿಸಿದೆಯಾದರೂ ಮುಂದೆ ದಾಳಿಗಳು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಧರ್ಮಶಾಲಾ ಸೇರಿದಂತೆ ಉತ್ತರ ಭಾರತದ ಹಲವು ವಿಮಾನ ನಿಲ್ದಾಣಗಳನ್ನು ಮೇ 10ರವರೆಗೆ ಮುಚ್ಚಲಾಗಿದೆ.

ಈ ಕಾರಣದಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಪ್ರಮುಖ ಪಂದ್ಯವಾದ ಪಂಜಾಬ್ ಕಿಂಗ್ಸ್ (PBKS) ಮತ್ತು ಮುಂಬೈ ಇಂಡಿಯನ್ಸ್ (MI) ನಡುವಿನ ಸೆಣಸಾಟವನ್ನು ಹಿಮಾಚಲ ಪ್ರದೇಶದ ಧರ್ಮಶಾಲಾದ HPCA ಸ್ಟೇಡಿಯಂನಿಂದ ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿದೆ.

ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಕಾರ್ಯದರ್ಶಿ ಅನಿಲ್ ಪಟೇಲ್ ಅವರು ಈ ಪಂದ್ಯವನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲಾಗುವುದು ಎಂದು ದೃಢಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!