Friday, December 8, 2023

Latest Posts

ಕಾವೇರಿ ವಿವಾದವನ್ನು ವಿಪಕ್ಷಗಳು ಅಸ್ತ್ರವಾಗಿ ಮಾಡಿಕೊಂಡಿವೆ-ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ಇಂದು ಬೆಂಗಳೂರು ಬಂದ್‌ ನಡೆಯುತ್ತಿದೆ. ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಇದೆಲ್ಲಾ ವಿಪಕ್ಷಗಳ ಮಾಡುತ್ತಿರುವ ರಾಜಕೀಯ ಎಂದು ಹರಿಹಾಯ್ದರು.

ಮೈಸೂರಿನಲ್ಲಿ ಮಾಧ್ಯಮವರೊಂದಿಗೆ ಬೆಂಗಳೂರು ಬಂದ್‌ ಬಗ್ಗೆ ಮಾತನಾಡುತ್ತಾ..ʻ ಕಾವೇರಿ ನೀರಿನ ವಿವಾದವನ್ನು ವಿಪಕ್ಷಗಳು ಅಸ್ತ್ರವಾನ್ನಾಗಿ ಮಾಡಿಕೊಂಡು ತ್ಮ ರಾಜಕೀಯದ ಬೇಲೆ ಬೇಯಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಹೋರಾಟ ಮಾಡುವ ಹಕ್ಕಿದೆ. ಪ್ರತಿಭಟನೆ ಮಾಡುವವರಿಗೆ ನಾವು ಅಡ್ಡಿಯುಂಟು ಮಾಡುವುದಿಲ್ಲ. ರಾಜ್ಯದ ಜನರ ಹಿತಕ್ಕಾಗಿ ನಾವು ಯಾವುದೇ ಕೆಲಸ ಮಾಡಲು ಸಿದ್ಧ, ಕಾವೇರಿ ವಿಚಾರದಲ್ಲಿ ಕಾಂಗ್ರೆಸ್‌ ಸರಕಾರ ವಿಫಲವಾಗಿದೆ ಎಂಬ ವಿಪಕ್ಷಗಳ ಟೀಕೆ ಸರಿಯಿಲ್ಲ ಎಂದು ಆಕ್ರೋಶ ಹೊರಹಾಕಿದರು.

ವಿರೋಧ ಪಕ್ಷಗಳು ಜನರ ಹಿತಕ್ಕಾಗಿ ಹೋರಾಟ ಮಾಡಿದರೆ ನಾವು ಖಂಡಿತಾ ಅದನ್ನು ಸ್ವಾಗತಿಸುತ್ತೇವೆ. ಅದು ಬಿಟ್ಟು ಅವರವರ ಸ್ವಾರ್ಥಕ್ಕಾಗಿ ಕಾವೇರಿ ಹೋರಾಟದ ಹಾದಿ ಹಿಡಿದಿದ್ದಾರೆಂದು ಕಿಡಿ ಕಾರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!