ASIAN GAMES 2023: ಸೈಲಿಂಗ್​ನಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ನೇಹಾ ಠಾಕೂರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದ ಹ್ಯಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. ನೇಹಾ ಠಾಕೂರ್ ಮಹಿಳೆಯರ ದೋಣಿ ಸೇಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಸೈಲಿಂಗ್ ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ. ಏಷ್ಯನ್ ಗೇಮ್ಸ್ ನಲ್ಲಿ ಈವರೆಗೆ ಭಾರತಕ್ಕೆ ಒಟ್ಟು 12 ಪದಕಗಳು ದೊರೆತಿದೆ.

ಬಾಲಕಿಯರ ಡಿಂಗಿ ಐಎಲ್ ಸಿಎ4 ಸ್ಪರ್ಧೆಯಲ್ಲಿ ನಾವಿಕ ನೇಹಾ ಠಾಕೂರ್ 11 ರೇಸ್​ಗಳಲ್ಲಿ ಒಟ್ಟು 27 ಅಂಕ ಗಳಿಸಿ ಬೆಳ್ಳಿ ಗೆದ್ದರು. ಥಾಯ್ಲೆಂಡ್‌ನ ನೊಪಸೋರ್ನ್ ಖುನ್ಬೂಂಜಾನ್ 16 ಅಂಕಗಳೊಂದಿಗೆ ಚಿನ್ನ ಪದಕಕ್ಕೆ ಕೊರಳೊಡ್ಡಿದರೆ, ಸಿಂಗಾಪುರದ ಕೀರಾ ಮೇರಿ ಕಾರ್ಲೈಲ್ 28 ಅಂಕಗಳೊಂದಿಗೆ ಕಂಚಿನ ಪದಕ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!