October 15, 2026
Thursday, October 15, 2026
spot_img

ಮಸೂದೆಯ ಸೋಲಿಗೆ ವಿಪಕ್ಷಗಳೇ ಕಾರಣ: ಡಿಎಂಕೆ, ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ರಾಜಕೀಯ ಪಕ್ಷಗಳಿಂದ ಭರ್ಜರಿ ಪ್ರಚಾರ ನಡೆಯುತ್ತಿದೆ. ಇಂದು ಬಿರುಸಿನ ಮತಬೇಟೆ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಡಿಎಂಕೆ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಅಂಗೀಕಾರವಾಗಬೇಕಿದ್ದ ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಸೋಲಿಗೆ ವಿಪಕ್ಷಗಳೇ ಕಾರಣವಾಗಿದ್ದು, ಈ ಮೂಲಕ ಮಹಿಳೆರಿಗೆ ಮತ್ತು ತಮಿಳುನಾಡಿನ ಹಿತಾಸಕ್ತಿಗೆ ದ್ರೋಹ ಬಗೆದಿವೆ ಎಂದು ಅಮಿತ್ ಶಾ ಆಕ್ರೋಶ ಹೊರಹಾಕಿದರು.

ದೇಶದ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಮೀಸಲಾತಿ ಮಸೂದೆ ಜಾರಿಗೆ ತರಲು ಬಯಸಿದ್ದೆವು. ಆದರೆ ಕಾಂಗ್ರೆಸ್ ಮತ್ತು ಡಿಎಂಕೆ ತಮ್ಮ ವೈಯಕ್ತಿಕ ಸ್ವಾರ್ಥಕ್ಕೆ ಮಸೂದೆಯ ವಿರುದ್ಧ ಮತ ಚಲಾಯಿಸಿ ತಾಯಂದಿರು ಮತ್ತು ಸಹೋದರಿಯರ ಹಕ್ಕನ್ನು ಕಿತ್ತುಕೊಂಡಿವೆ ಎಂದು ಟೀಕಿಸಿದರು.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷಕ್ಕೆ ರಾಜ್ಯದ ಅಭಿವೃದ್ದಿಕ್ಕಿಂತ ಕುಟುಂಬ ರಾಜಕಾರಣವೇ ಅತೀ ಮುಖ್ಯ ಅನಿಸಿದೆ. ಸಿಎಂ ಸ್ಟಾಲಿನ್ ಗೆ ಮಗನ ರಾಜಕೀಯ ಭವಿಷ್ಯದ ಬಗೆಯೇ ಹೆಚ್ಚು ಆಸಕ್ತಿ. ಇದರಿಂದ ತಮಿಳುನಾಡಿನಲ್ಲಿ ಅಭಿವೃದ್ಧಿ ಎಂಬುವುದು ಶೂನ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

Must Read