ಹಿಜಾಬ್‌ ಗೆ ವಿರೋಧ: ಧರ್ಮಗುರುಗಳ ಪೇಟಕ್ಕೇ ಕೈ ಹಾಕಿದ ಇರಾನಿಯನ್ನರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಿಜಾಬ್‌ ವಿರೋಧಿಸಿ ಇರಾನ್‌ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಹೊಸ ಹೊಸ ರೂಪ ಪಡೆದುಕೊಳ್ಳುತ್ತಿದ್ದು ಇದೀಗ ಇರಾನಿಯನ್ನರು ಧರ್ಮಗುರುಗಳ ಪೇಟಕ್ಕೇ ಕೈ ಹಾಕಿರುವ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ.

ಈ ಘಟನೆಗಳು ನಡೆಯುತ್ತಿರುವ ಹಿಜಾಬ್ ವಿರೋಧಿ ಪ್ರತಿಭಟನೆಯ ಭಾಗವಾಗಿದ್ದು ಕಟ್ಟುನಿಟ್ಟಾದ ಹಿಜಾಬ್ ನಿಯಮಗಳನ್ನು ಜಾರಿಗೊಳಿಸುವ ನೈತಿಕತೆಯ ಪೋಲೀಸರು 22 ವರ್ಷದ ಮಹ್ಸಾ ಅಮಿನಿಯನ್ನು ಬಂಧಿಸಿ ಸೆಪ್ಟೆಂಬರ್ 17 ರಂದು ಕಸ್ಟಡಿಯಲ್ಲಿ ಆಕೆ ಮರಣಹೊಂದಿದ ನಂತರ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಒಂದು ವೀಡಿಯೊದಲ್ಲಿ, ಒಬ್ಬ ಮಹಿಳೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಧರ್ಮಗುರುಗಳ ಬಳಿಗೆ ಓಡಿ ಹೋಗಿ ಅವರ ಪೇಟಕ್ಕೆ ಕೈ ಹಾಕಿ ಬಡಿಯುತ್ತಾಳೆ. ಇದು ಹಿಜಾಬ್‌ ಕುರಿತಾಗಿ ಅಲ್ಲಿನ ಮಹಿಳೆಯರು ಎಷ್ಟು ರೋಸಿ ಹೋಗಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಏತನ್ಮಧ್ಯೆ, ಇರಾನ್‌ನ ಕಟ್ಟುನಿಟ್ಟಾದ ಡ್ರೆಸ್ ಕೋಡ್ ವಿರುದ್ಧದ ಪ್ರತಿಭಟನೆಗಳು ಏಳನೇ ವಾರಕ್ಕೆ ಕಾಲಿಟ್ಟಿದ್ದು, ಅಧ್ಯಕ್ಷರ ಎಚ್ಚರಿಕೆಯ ಅಲ್ಟಿಮೇಟಮ್ ಅನ್ನು ಧಿಕ್ಕರಿಸಿದ ವಿದ್ಯಾರ್ಥಿಗಳ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿ ದಾಳಿ ಮಾಡಿವೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!