Sunday, February 5, 2023

Latest Posts

ತುಂಬಿ ತುಳುಕುತ್ತಿದ್ದ ಆರ್ಡರ್​ಗಳು: ಖುದ್ದು ಡೆಲಿವರಿಗೆ ಹೊರಟ ಝೊಮ್ಯಾಟೋ ಸಿಇಒ ದೀಪೀಂದರ್ ಗೋಯಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಝೊಮ್ಯಾಟೋ ಸಿಇಒ ದೀಪೀಂದರ್ ಗೋಯಲ್ ಅವರು ಡೆಲಿವರಿ ಏಜೆಂಟ್​ ಸಮವಸ್ತ್ರ ಧರಿಸಿ ಡೆಲಿವರಿ ನಡೆಸಿದ್ದಾರೆ.

ಈ ಕುರಿತು ಫೋಟೋ ಹಂಚಿಕೊಂಡಿರುವ ಅವರು, ಹೊಸ ವರ್ಷದ ಹಿಂದಿನ ದಿನ ‘ಝೊಮ್ಯಾಟೋ ಆ್ಯಪ್​ನಲ್ಲಿ ಆರ್ಡರ್​ಗಳು ತುಂಬಿ ತುಳುಕುತ್ತಿದ್ದ ಕಾರಣ ಡೆಲಿವರಿ ಏಜೆಂಟ್​ ಸಮವಸ್ತ್ರ ಧರಿಸಿ ಡೆಲಿವರಿಗೆ ಹೊರಟಿದ್ದೇನೆ. ಕೆಲಗಂಟೆಗಳ ನಂತರ ವಾಪಸಾಗುತ್ತೇನೆ’ ಎಂದು ಹೇಳಿದ್ದಾರೆ.

2022 ಮುಗಿದು 2023ನ್ನು ಸ್ವಾಗತಿಸುವ ಸಲುವಾಗಿ ಎಲ್ಲರು ಫುಡ್​​ ಡೆಲಿವರಿ ಆ್ಯಪ್​ಗಳ ಮೂಲಕ ಆರ್ಡರ್​​ ಮಾಡುತ್ತಿದ್ದರು. ಹೀಗಾಗಿ ಎಲ್ಲೆಡೆ ಬ್ಯುಸಿ ಇದ್ದ ಕಾರಣ ಕೆಲ ಗಂಟೆಗಳ ಕಾಲ ದೀಪೀಂದರ್​ ಡೆಲಿವರಿ ಏಜೆಂಟ್ ಕಾರ್ಯ ನಿರ್ವಹಿಸಿದ್ದಾರೆ.

‘ಇದು ನನ್ನ ಮೊದಲ ಅನುಭವ. ಝೊಮ್ಯಾಟೋ ಪ್ರಧಾನ ಕಚೇರಿಯಿಂದ ಡೆಲಿವರಿಗೆ ಹೊರಟು ಒಟ್ಟು ನಾಲ್ಕು ಗ್ರಾಹಕರಿಗೆ ಆಹಾರ ತಲುಪಿಸಿದ್ದೇನೆ. ಹೊಸ ವರ್ಷದ ಮುನ್ನಾದಿನವು, ಒಟ್ಟು ಮೂರು ವರ್ಷಗಳ ಮಾರಾಟ ದಾಖಲೆಯನ್ನು ಮುರಿದಿದೆ’ ಎಂದು ಅವರು ಹೇಳಿದ್ದಾರೆ.
ಈ ಪೋಸ್ಟ್​ಗೆ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!