ಅವೇಂಜರ್ಸ್ ಖ್ಯಾತಿಯ ನಟ ಜೆರ್ಮಿ ರನ್ನರ್ ಗೆ ಅಪಘಾತ: ಸ್ಥಿತಿ ಚಿಂತಾಜನಕ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಲಿವುಡ್ ನ ನಟ, ಅವೇಂಜರ್ಸ್ ಖ್ಯಾತಿಯ ನಟ ಜೆರ್ಮಿ ರನ್ನರ್ ಗೆ ಅಪಘಾತವಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.

ದಟ್ಟ ಮಂಜು ಮಧ್ಯ ಕಾರು ಚಲಾಯಿಸುತ್ತಿರುವಾಗ ಅಪಘಾತಕ್ಕೀಡಾಗಿದೆ ಎಂದು ಹೇಳಲಾಗುತ್ತಿದೆ. ಅಪಘಾತವಾದ ತಕ್ಷಣವೇ ಏರ್ ಲಿಫ್ಟ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆವಾಡಾದಲ್ಲಿ ಹಲವು ದಿನಗಳಿಂದ ಹಿಮಪಾತವಾಗುತ್ತಿದೆ. ಅಲ್ಲದೇ ವಿದ್ಯುತ್ ಕೂಡ ಕೈಕೊಟ್ಟಿದೆ. ಸಂಚಾರಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಜೆರ್ಮಿ ಕಾರು ಚಲಾಯಿಸಿದ್ದಾರೆ. ದಟ್ಟ ಮಂಜು ಇದ್ದ ಕಾರಣಕ್ಕಾಗಿ ರಸ್ತೆ ಕಾಣದೇ ಅಪಘಾತ ಮಾಡಿಕೊಂಡಿದ್ದಾರೆ ಎಂದು ಅವರ ಆಪ್ತರು ತಿಳಿಸಿದ್ದಾರೆ.

ಸ್ಥಿತಿ ಗಂಭೀರವಾಗಿರುವುದರಿಂದ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರಂತೆ ವೈದ್ಯರು. ಹಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಇವರು, ಆಸ್ಕರ್ ಪ್ರಶಸ್ತಿ ವಿಜೇತ ‘ಹರ್ಟ್ ಲಾಕರ್’ ಸಿನಿಮಾದಲ್ಲೂ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!