ಟೀಮ್ ಇಂಡಿಯಾದಿಂದ ಸಂಘಟಿತ ಬೌಲಿಂಗ್: 215 ರನ್​ಗೆ ಶ್ರೀಲಂಕಾ ಆಲೌಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾರತದ ವಿರುದ್ಧ ಶ್ರೀಲಂಕಾ ದ್ವಿತೀಯ ಏಕದಿನ ಪಂದ್ಯದಲ್ಲಿ 215 ರನ್​ಗೆ ಆಲೌಟ್ ಆಗಿದೆ. ಈ ಮೂಲಕ ಭಾರತಕ್ಕೆ 216 ಟಾರ್ಗೆಟ್ ನೀಡಿದೆ.
​ಕೋಲ್ಕೊತಾದ ಈಡನ್​ ಗಾರ್ಡನ್ಸ್​ನಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ನಡೆಸಿದ ಶ್ರೀಲಂಕಾ 39.4 ಓವರ್​ಗಳಲ್ಲಿ 215 ರನ್​ ಗಳಿಸಿದೆ. ಭಾರತ ಪರ ಕುಲ್​ದೀಪ್​ ಯಾದವ್​(3), ಉಮ್ರಾನ್​ ಮಲಿಕ್​(2) ಮತ್ತು ಮೊಹಮ್ಮದ್​ ಸಿರಾಜ್(3)​ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದರು.
ಲಂಕಾ ಪರ ಆರಂಭಿಕ ಆಟಗಾರ ಆವಿಷ್ಕ ಪೆರ್ನಾಂಡೋ(20), ನುವಾನಿಡು ಫೆರ್ನಾಂಡೋ(50) ಅರ್ಧಶತಕ ಬಾರಿಸಿ ಉತ್ತಮ ಆರಂಭ ನೀಡಿದರು.
ವಿಕೆಟ್​ ಕೀಪರ್ ಕುಸಲ್​ ಮೆಂಡಿಸ್​(34)​ ಹಾಗೂ ಕಳೆದ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದ ನಾಯಕ ದಸುನ್​ ಶನಕ ಈ ಪಂದ್ಯದಲ್ಲಿ 2 ರನ್​ಗೆ ವಿಕೆಟ್​ ಒಪ್ಪಿಸಿದರು. ಇವರ ಬೆನ್ನಲ್ಲೇ ಉಳಿದ ಆಟಗಾರರು ಪೆವಿಲಿಯನ್​ ಪರೇಡ್​ ನಡೆಸಿದರು.
ಅಂತಿಮ ಹಂತದಲ್ಲಿ ಬಾಲಂಗೋಚಿಗಳಾದ ವನಿಂದು ಹಸರಂಗ(21), ಚಾಮಿಕ ಕರುಣರತ್ನೆ(14) ದುನಿತ್​ ವೆಲ್ಲಲಗೆ(32) ಸಣ್ಣ ಪ್ರಮಾಣದ ಹೋರಾಟ ನಡೆಸಿದ ಪರಿಣಾಮ ತಂಡ 200ರ ಗಡಿ ದಾಟಿತು.
ಗಾಯಾಳು ಯಜುವೇಂದ್ರ ಚಹಲ್​ ಬದಲಿಗೆ ಆಡುವ ಅವಕಾಶ ಪಡೆದ ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್​ ಯದವ್​ ಈ ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಉಪಯುಕ್ತವಾಗಿ ಬಳಸಿಕೊಂಡರು. 10 ಓವರ್​ ಬೌಲಿಂಗ್​ ನಡೆಸಿ 51 ರನ್​ಗೆ 3 ವಿಕೆಟ್​ ಉರುಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!