ಸಂಸ್ಕೃತ ಎಲ್ಲಾ ಭಾಷೆಗಳಿಗೆ ಮೂಲ ಭಾಷೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಹೊಸದಿಗಂತ ವರದಿ,ಚಿಕ್ಕಮಗಳೂರು:

ರಾಜ್ಯದಲ್ಲಿ ಮತ್ತೊಂದು ಸಂಸ್ಕೃತ ವಿವಿ ಸ್ಥಾಪಿಸುವ ವಿಚಾರದಲ್ಲಿ ಕೇವಲ ಸಂಕುಚಿತ ಭಾವನೆಯಿಂದ ಯೋಚಿಸಬಾರದು. ಸಂಸ್ಕೃತ ಎಲ್ಲಾ ಭಾಷೆಗಳಿಗೆ ಮೂಲ ಭಾಷೆ. ಅದನ್ನು ಕಲಿಯುವುದು ಸಹ ತುಂಬಾ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಮತ್ತೊಂದು ಸಂಸ್ಕೃತ ವಿವಿ ಸ್ಥಾಪನೆ ಕುರಿತು ಅಪಸ್ವರ ಎದ್ದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಎಲ್ಲಾ ಧರ್ಮ, ಎಲ್ಲಾ ಸಮುದಾಯ, ಎಲ್ಲಾ ಭಾಷೆಗಳ ರಾಜ್ಯ. ಎಲ್ಲರೂ ಒಟ್ಟಿಗೆ ಬದುಕುತ್ತಿದ್ದೇವೆ. ಕನ್ನಡ ಭಾಷೆ ಬೆಳೆಸಲು ಏನು ಮಾಡಬೇಕು ಅದನ್ನು ಮಾಡೋಣ ಮತ್ತೊಂದು ಭಾಷೆ ಬೇಡ ಎನ್ನುವುದು ಸರಿಯಲ್ಲ ಎಂದರು.
ನಾವು ಯಾವ ವರ್ಗವನ್ನೂ ಓಲೈಕೆ ಮಾಡುವುದಿಲ್ಲ. ಯಾವುದೇ ಭಾಷೆ ಒಂದು ಜಾತಿ, ಧರ್ಮದ ಭಾಷೆಯಲ್ಲ. ಯಾರು ಯಾವ ಭಾಷೆಯನ್ನಾದರೂ ಕಲಿಯಬಹುದು. ಸಂಸ್ಕೃತವನ್ನು ಕೇವಲ ಮೇಲ್ವರ್ಗದ ಜನರಷ್ಟೇ ಅಲ್ಲ, ಎಲ್ಲಾ ವರ್ಗದ ಜನ, ಎಲ್ಲಾ ಮಠಗಳಲ್ಲೂ ಇಂದು ಸಂಸ್ಕೃತ ಪಾಠಶಾಲೆ ಇದೆ. ಸಂಸ್ಕೃತ ಕಲಿತರೆ ವೇದ, ಆಯುರ್ವೇದ, ಯೋಗ, ತಂತ್ರಜ್ಞಾನ ಎಲ್ಲವನ್ನೂ ಕಲಿಯಬಹುದು. ಅದು ಯೋವುದೋ ಒಂದು ಜಾತಿ, ಧರ್ಮಕ್ಕೆ ಸೀಮಿತವಾದ ಭಾಷೆಯಲ್ಲ ಎಂದರು.
ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಅಲ್ಲಿನ ಚುನಾವಣಾ ಉಸ್ತುವಾರಿಯೂ ಆಗಿರುವ ಶೋಭಾ ಕರಂದ್ಲಾಜೆ ಹೇಳಿದರು.
ಮುಖ್ಯಮಂತ್ರಿ ಯೋಗಿ, ಪ್ರಧಾನಿ ಮೋದಿ ಜೋಡಿ ಅಲ್ಲಿ ಕೆಲಸ ಮಾಡುತ್ತಿದೆ. ಯಾವುದೇ ಹಳ್ಳಿ, ನಗರ ಪ್ರದೇಶದಲ್ಲಿ ಯಾವುದೇ ಜಾತಿ, ವರ್ಗದ ಜನ ಯೋಗಿ ಮತ್ತು ಮೋದಿ ಬೇಕು ಎಂದು ಹೇಳುತ್ತಿದ್ದಾರೆ. ಗೂಂಡಾ ರಾಜ್ಯವಾಗಿದ್ದ ಉತ್ತರ ಪ್ರದೇಶವನ್ನ ಒಳ್ಳೆಯ ರಾಜ್ಯ ಮಾಡಬಹುದು ಎನ್ನುವುದನ್ನು ಯೋಗಿ ಆಡಳಿತ ತೊರಿಸಿಕೊಟ್ಟಿರುವುದು. ಭ್ರಷ್ಟಾಚಾರ ರಹಿತ ಆಡಳಿತ ನೀಡಿರುವುದರಿಂದ ಪಕ್ಷ ಮತ್ತೊಮ್ಮೆ ಬಿಜೆಪಿಯನ್ನು ಬಯಸುತ್ತಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!