62 ವರ್ಷಗಳ ಸಂಪ್ರದಾಯ ಬದಲಾಯಿಸಿದ ಆಸ್ಕರ್: ಕಾರ್ಪೆಟ್ ಬಣ್ಣ ಬದಲಾವಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದಾದ್ಯಂತ ಎಲ್ಲರ ಕಣ್ಣುಗಳು ಇಂದು ನಡೆಯುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ಮೇಲೆ ನೆಟ್ಟಿದೆ. ಕೆಲವೇ ಗಂಟೆಗಳಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಈ ವರ್ಷ ಆಸ್ಕರ್ ಪ್ರಶಸ್ತಿ ಯಾರ್ಯಾರ ಮುಡಿಗೆ ಬರುತ್ತದೆಯೋ ಎಂಬ ಕಾತರ ಎಲ್ಲರಿಗೂ ಇದೆ.  ಭಾರತದಲ್ಲೂ RRR ಚಿತ್ರದ ನಾಟು ನಾಟು ಹಾಡು ಆಸ್ಕರ್‌ನಲ್ಲಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಇಡೀ ವಿಶ್ವವನ್ನೇ ರೋಮಾಂಚನಗೊಳಿಸಿರುವ ಈ ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವುದು ಖಚಿತ ಎಂದು ಹಾಲಿವುಡ್ ಮಾಧ್ಯಮಗಳೂ ಸುದ್ದಿ ಬರೆದಿದ್ದವು.

ಮಾರ್ಚ್ 12 ರಂದು ನಡೆಯುವ ಈ ಕಾರ್ಯಕ್ರಮಕ್ಕೆ ಪ್ರಪಂಚದಾದ್ಯಂತದ ನಟರು ಮತ್ತು ತಂತ್ರಜ್ಞರು ಆಗಮಿಸುತ್ತಾರೆ. ಆಸ್ಕರ್ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯಲು ಎಲ್ಲರಿಗೂ ತುಂಬಾ ಆಸಕ್ತಿ ಇದೆ. ರೆಡ್ ಕಾರ್ಪೆಟ್ ಮೇಲೆ ಪೋಸ್ ನೀಡಲು ವಿಶೇಷ ವಿನ್ಯಾಸದ ಉಡುಗೆಯೊಂದಿಗೆ ಮಿಂಚುತ್ತಾರೆ. ಆದರೆ ಈ ವರ್ಷ ಈ ಕಾರ್ಪೆಟ್ ಬಣ್ಣ ಬದಲಾಯಿಸಲಿದೆ. ರೆಡ್ ಕಾರ್ಪೆಟ್ ಸ್ವಲ್ಪ ಶಾಂಪೇನ್ ಬಣ್ಣಕ್ಕೆ ತಿರುಗಿದೆ.

ಆಸ್ಕರ್‌ನಲ್ಲಿ ರೆಡ್ ಕಾರ್ಪೆಟ್ ಸಂಪ್ರದಾಯವು 1961 ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ಕಳೆದ ವರ್ಷದವರೆಗೂ ಅಕಾಡೆಮಿ ಈ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿದೆ. ಆದರೆ ಈ ವರ್ಷ, 62 ವರ್ಷಗಳ ಹಿಂದಿನ ಸಂಪ್ರದಾಯವನ್ನು ಮುರಿದು, ಅತಿಥಿಗಳಿಗಾಗಿ ಕೆಂಪು ಬದಲಿಗೆ, ಶಾಂಪೇನ್ ಕಾರ್ಪೆಟ್ ಅನ್ನು ಹಾಕಲಾಗುತ್ತದೆ. ಮತ್ತು ಈ ಶಾಂಪೇನ್ ಕಾರ್ಪೆಟ್‌ನಲ್ಲಿ ನಕ್ಷತ್ರಗಳ ಸೌಂದರ್ಯವು ಹೇಗೆ ಹೊಳೆಯುತ್ತದೆ ಎಂಬುದು ಕಾಣಸಿಗುತ್ತದೆ. ಈ ಕಾರ್ಯಕ್ರಮವನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ವಿಶೇಷ ಪ್ರಸಾರದಲ್ಲಿ ನೋಡಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!