Tuesday, March 28, 2023

Latest Posts

ಆಸ್ಕರ್ ಪ್ರಶಸ್ತಿ 2023: ಈ ವರ್ಷದ ಆಸ್ಕರ್‌ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

2023ನೇ ಸಾಲಿನ ಆಸ್ಕರ್‌ ಪ್ರಶಸ್ತಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಅನೇಕ ಸಿನಿ ಕಲಾವಿದರು ಪ್ರತಿಷ್ಠಿತ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಈ ಬಾರಿಯ ವಿಶೇಷವೆಂದರೆ ಭಾರತಕ್ಕೆ ಎರಡು ಆಸ್ಕರ್​ ಪ್ರಶಸ್ತಿ ಬಂದಿರುವುದು. ‘ನಾಟು ನಾಟು’ ಮೂಲ ಗೀತೆ ಮತ್ತು ‘ದಿ ಎಲಿಫೆಂಟ್ ವಿಸ್ಪರರ್ಸ್’ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದು ಭಾರತೀಯ ಚಲನಚಿತ್ರ ರಂಗಕ್ಕೆ ಐತಿಹಾಸಿಕ ದಿನವಾಗಿದೆ.ಈ ಬಾರಿ ಅವಾರ್ಡ್​ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.

ಅತ್ಯುತ್ತಮ ಸಿನಿಮಾ : ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​

ಅತ್ಯುತ್ತಮ ನಿರ್ದೇಶನ : ಡ್ಯಾನಿಯಲ್ ಕ್ವಾನ್ ಹಾಗೂ ಡ್ಯಾನಿಯಲ್ ಶೈನರ್ಟ್​ (ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​)

ಅತ್ಯುತ್ತಮ ನಟ : ಬ್ರೆಂಡನ್ ಫ್ರೆಸರ್ (ದಿ ವೇಲ್​)

ಅತ್ಯುತ್ತಮ ನಟಿ :ಮಿಶೆಲ್ ಯೋ (ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​ )

ಅತ್ಯುತ್ತಮ ಪೋಷಕ ನಟ : ಕಿ ಹು ಕ್ವಾನ್ (ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್​)

ಅತ್ಯುತ್ತಮ ಪೋಷಕ ನಟಿ : ಜೇಮಿ ಲೀ ಕರ್ಟಿಸ್ (ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್)​

ಅತ್ಯುತ್ತಮ ಛಾಯಾಗ್ರಹಣ : ಜೇಮ್ಸ್ ಫ್ರೆಂಡ್- ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್

​ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ : ಆಲ್​ ಕ್ವಾಯ್ಟ್​ ಆನ್​ ದಿ ವೆಸ್ಟರ್ನ್ ಫ್ರಂಟ್

ಬೆಸ್ಟ್ ಡಾಕ್ಯುಮೆಂಟರಿ ಫೀಚರ್ : ನವಾಲ್ನಿ

ಅತ್ಯುತ್ತಮ ಸಂಕಲನ : ಪೌಲ್ ರೋಜರ್ಸ್​- ಎವ್ರಿಥಿಂಗ್​ ಎವ್ರಿವೇರ್​ ಆಲ್​ ಎಟ್​ ಒನ್ಸ್

ಬೆಸ್ಟ್ ವಿಶ್ಯುವಲ್ ಎಫೆಕ್ಟ್ಸ್ : ಅವತಾರ್ – ದಿ ವೇ ಆಫ್ ವಾಟರ್

ಅತ್ಯುತ್ತಮ ವಸ್ತ್ರವಿನ್ಯಾಸ : ರುತ್ ಕಾರ್ಟರ್​- ಬ್ಲ್ಯಾಕ್ ಪ್ಯಾಂಥರ್: ವಕಾಂಡಾ ಫಾರೆವರ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!