April 20, 2026
Monday, April 20, 2026
spot_img

ನಮ್ಮಪ್ಪ ಜನರಿಗಾಗಿ ಬದುಕಿದವರು, ಸೇವೆಗೆ ಮುಂದೆ ನಿಂತವರು: ವಿನಯ್‌ ಕುಲಕರ್ಣಿ ಪುತ್ರಿಯ ಭಾವುಕ ಪೋಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ, ಶಾಸಕ ವಿನಯ್‌ ಕುಲಕರ್ಣಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಬೆನ್ನಲ್ಲೇ ಕುಲಕರ್ಣಿ ಪುತ್ರಿಯರ ಭಾವುಕ ಪೋಸ್ಟ್‌ ವೈರಲ್‌ ಆಗಿದೆ.

ಪುತ್ರಿ ವೈಶಾಲಿ ಪೋಸ್ಟ್‌ ಮಾಡಿದ್ದು, ಉತ್ತರ ಕರ್ನಾಟಕದಾದ್ಯಂತ ವಿದ್ಯಾರ್ಥಿ ನಾಯಕರಿಂದ ನಾಯಕರಾಗುವವರೆಗೆ ಅವರ ಪಯಣವನ್ನು ಜನ ನೋಡಿದ್ದಾರೆ.

ರೈತರ ಜತೆ ಅವರಿಗಿದ್ದ ಬಾಂಧವ್ಯ, ಡೊಡ್ಡ ಡೈರಿ ಕಾರ್ಯಾಚರಣೆ, ಯುವ ರೈತರಿಗೆ ನಮ್ಮ ತಂದೆ ಪ್ರೇರಣೆ. ಎಲ್ಲ ವಯಸ್ಸಿನವರ ಜೊತೆಗೂ ಬೆರೆಯುವ ಅವರ ಸ್ವಭಾವ ಅದ್ಭುತ. ಜನರ ಬದುಕಿಗಾಗಿ, ಅವರ ಸೇವೆಗಾಗಿ ಮುಂಚೂಣಿಯಲ್ಲಿದ್ದರು.

https://www.instagram.com/p/DXR9u2Cl6T3/?utm_source=ig_embed&ig_rid=8ea86f2e-b391-410b-808c-97bf3d34ac2e

ಅವರನ್ನು ಎಲ್ಲರೂ ಕೆಲಸಗಳಿಂದಲೇ ಗುರುತಿಸಿದ್ದಾರೆ. ಅವರು ನಮ್ಮ ಹೆಮ್ಮ, ನಮ್ಮ ನಾಯಕ ಹಾಗೂ ನಮ್ಮ ಮಾರ್ಗದರ್ಶಕ. ನಮಗೆ ಭಯವಿಲ್ಲ ದೃಢವಾಗಿದ್ದೇವೆ. ಅವರ ಸತ್ಯದ ಮೇಲೆ ನಂಬಿಕೆ ಇಟ್ಟಿದ್ದೇವೆ.

ನ್ಯಾಯಾಲಯದ ಬಗ್ಗೆ ಗೌರವ ನಂಬಿಕೆ ಎರಡೂ ಇದೆ. ಮೇಲ್ಮನವಿ ಸಲ್ಲಿಸುತ್ತೇವೆ. ಕಷ್ಟದ ಸಮಯದಲ್ಲಿ ನಮ್ಮ ಜೊತೆ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !