ಕೇಂದ್ರದ ಎಲ್ಲಾ ನಿರ್ಣಯಕ್ಕೆ ನಮ್ಮ ಸಂಪೂರ್ಣ ಬೆಂಬಲ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ನಿರ್ಣಯ ತೆಗೆದುಕೊಂಡರೂ ನನ್ನ ಸಂಪೂರ್ಣ ಬೆಂಬಲ ಇರಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಮೊದಲ ಬಾರಿಗೆ ಪ್ರವಾಸಿಗರ ಮೇಲೆ ಉಗ್ರರು ದಾಳಿ ಮಾಡಿದ್ದಾರೆ. ಪಾಕಿಸ್ತಾನದ ಬೆಂಬಲದಿಂದ ಮಾಡಿದ್ದಾರೆ ಎಂಬ ಮಾಹಿತಿ ಕೇಂದ್ರದ ಬಳಿ ಇದೆ. ಇಡೀ ದೇಶದ ಎಲ್ಲಾ 140 ಕೋಟಿ ಜನರು ಈ ವಿಷಯದಲ್ಲಿ ಕೇಂದ್ರ ಸರ್ಕಾರ ಹಾಗೂ ಮೋದಿ ಅವರ ನೇತೃತ್ವದಲ್ಲಿ ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬೆಂಬಲ ಕೊಡಬೇಕು. ಒಂದೇ ಧ್ವನಿಯಲ್ಲಿ ಬೆಂಬಲ ಕೊಡಬೇಕು ಎಂದರು.

ನಾನು ರಾಜಕೀಯ ಪಕ್ಷದ ನಾಯಕ, ಎನ್‌ಡಿಎ ಮುಖಂಡನಾಗಿ ಹೇಳುತ್ತೇನೆ. ನಾನು ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ. ಕೇಂದ್ರದ ಎಲ್ಲಾ ನಿರ್ಣಯಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಈ ವಿಷಯದಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಣಯಕ್ಕೆ ನಮ್ಮ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.

ಮೋದಿ ಹಾಗೂ ನನ್ನ ಸಂಬಂಧ ಇಂದು-ನಾಳೆ ಅಂತ ಅಲ್ಲ. ನನ್ನ ಜೀವನದ ಕೊನೆ ಘಟ್ಟದಲ್ಲಿ ಈ ನಿರ್ಣಯ ಮಾಡಿದ್ದೇನೆ. ಹಾಗಾಗಿ ಪ್ರಧಾನಿ ಮೋದಿ ಅವರೇನು ನನಗೆ ಕರೆ ಮಾಡಿಲ್ಲ. ಮಾಡೋ ಅವಶ್ಯಕತೆಯೂ ಇಲ್ಲ. ಅವಶ್ಯಕತೆ ಬಿದ್ದರೆ ನಾನೇ ಮೋದಿ ಅವರಿಗೆ ಪತ್ರ ಬರೆಯುತ್ತೇನೆ. ನಾನು ಅನೇಕ ಸಮಯದಲ್ಲಿ ಪತ್ರಗಳನ್ನು ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ. ನನಗೆ ಅನ್ನಿಸಿದ್ದನ್ನ ಆತಂಕ ಇಲ್ಲದೇ ಹೇಳುತ್ತೇನೆ ಎಂದು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!