Thursday, March 23, 2023

Latest Posts

ನಮ್ಮ ಸರ್ಕಾರ ರೈತರ ಪರ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜ್ಯದ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಮಂಡಿಸಿದ್ದು, ಈ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಈ ಬಾರಿಯ ಬಜೆಟ್ ನಲ್ಲಿ ರೈತರ ಸಮಸ್ಯೆಗಳನ್ನು ಮನಗಂಡು ಪರಿಹಾರ ನೀಡುವ ಯೋಜನೆಗಳನ್ನು ಘೋಷಿಸಿರುವುದು ನಮ್ಮ ಸರ್ಕಾರ ರೈತರ ಪರವಾಗಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ ಎಂದು ಬೊಮ್ಮಾಯಿ ತಿಳಿಸಿದರು.

ಕೃಷಿಗೆ ರೈತರ ಸಾಲದ ಮಿತಿಯನ್ನು 3 ರಿಂದ 5ಲಕ್ಷದ ವರೆಗೂ ಶೂನ್ಯ ಬಡ್ಡಿದರದಲ್ಲಿ ಸಾಲದಲ್ಲಿ ಹೆಚ್ಚಳವಾಗಿದ್ದು 30 ಲಕ್ಷಕ್ಕಿಂತ ಹೆಚ್ಚು ರೈತರಿಗೆ ಲಾಭವಾಗಲಿದೆ. ಅಗತ್ಯವಿದ್ದಾಗ ಬೀಜ ಗೊಬ್ಬರ ಖರೀದಿಗೆ ಭೂಸಿರಿ ಎಂಬ ಯೋಜನೆಯಡಿ 10ಸಾವಿರ ರೂ. ನೀಡಲಾಗುವುದು. 2500 ರೂ.ರಾಜ್ಯ ಸರ್ಕಾರ, 7500 ರೂ. ನಬಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ನೀಡಲಾಗುವುದು ಎಂದರು.

ಅದೇ ರೀತಿ ರೈತ ಯಾವುದೇ ಕಾರಣದಿಮದ ಸಾವನ್ನಪ್ಪಿದರೆ ಅವನ ಕುಟುಂಬಕ್ಕೆ ತೊಂದರೆಯಾದಬಾರದೆಂದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನ ಜ್ಯೋತಿ ಜೀವ ವಿಮೆ ಯೋಜನೆ ಘೋಷಣೆಯಾಗಿದೆ. ಸಹಜವಾಗಿ ತೀರಿಕೊಂಡರೂ 2 ಲಕ್ಷ ರೂ.ಗಳು ಅವರ ಕುಟುಂಬಕ್ಕೆ ದೊರೆಯುತ್ತದೆ. ರೈತರಿಗೆ 180 ಕೋಟಿ ರೂ.ಗಳ ವೆಚ್ಚದ ಯೋಜನೆ ಇದಾಗಿದ್ದು, 53 ಲಕ್ಷ ರೈತರಿಗೆ ಇದರಿಂದ ಅನುಕೂಲವಾಗಿದೆ. ರೈತರಿಗೆ ಬೆಲೆ ಕುಸಿತ ಆದಾಗ ಸಮಸ್ಯೆಯಾಗದಂತೆ ಆವರ್ತ ನಿಧಿ 3500 ಕೋಟಿ ಮೀಸಲಿಡಲಾಗಿದೆ.ಅತಿ ಹೆಚ್ಚು ಹಣ ಆವರ್ತ ನಿಧಿಗೆ ನೀಡಿರುವುದು ಒಂದು ದಾಖಲೆ. ನೀರಾವರಿಗೆ 25000 ಕೋಟಿ ರೂ.ಒದಗಿಸಲಾಗಿದೆ ಎಂದರು.

ಮಕ್ಕಳಿಗಾಗಿ ಬಜೆಟ್ ನಲ್ಲಿ ಅನೇಕ ಯೋಜನೆ ಜಾರಿ ತಂದಿದ್ದೇವೆ. ಸರ್ಕಾರಿ ಪಿಯುಸಿ ಮತ್ತು ಪದವಿ ಕಾಲೇಜಿನಲ್ಲಿ ಓದುವ ಮಕ್ಕಳಿಗೆ ಶುಲ್ಕ ಸಂಪೂರ್ಣ ವಿನಾಯ್ತಿ ನೀಡಲಾಗಿದೆ. 8 ಲಕ್ಷ‌ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಇದರಿಂದ ಲಾಭವಾಗಲಿದೆ. ಬಡವರ ಮಕ್ಕಳಿಗೆ ಶುಲ್ಕ ಕಟ್ಟಲು ಹಣ ಇಲ್ಲದೆ ಕಾಲೇಜು ಬಿಟ್ಟ ಪರಿಸ್ಥಿತಿ ಇರಬಾರದು ಎಂದು ಈ ಯೋಜನೆಯನ್ನು ತರಲಾಗಿದೆ ಎಂದರು.

ವಸತಿ ಶಾಲೆಗಳ ಅಭಿವೃದ್ದಿ, ಹೊಸ ಶಾಲೆಗಳ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲಾಗುವುದು. ಹಿಂದುಳಿದ ವರ್ಗದ ಮಕ್ಕಳಿಗೆ ಹೆಚ್ಚವರಿಯಾಗಿ ವಿದ್ಯಾ ಸಿರಿ ಯೋಜನೆ ನೀಡಲಾಗುತ್ತಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ 15000 ನೀಡಲಾಗುತ್ತಿದೆ. ಹಾಗೆಯೆ 100 ಎಸ್ ಸಿ ಎಸ್ ಟಿ ಹಾಸ್ಟೆಲ್ ಗಳು, 50 ಓಬಿಸಿ ಹಾಸ್ಟೆಲ್, 5 ಮೆಗಾ ಹಾಸ್ಟೆಲ್ ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಳೆದ ಬಾರಿ ಬಜೆಟ್ ನಲ್ಲಿ ಮೀಸಲಿಟ್ಟಿದ್ದಕ್ಕಿಂತ ಹೆಚ್ಚಿನ ಹಣ ಖರ್ಚು ಮಾಡಿದ್ದೇವೆ. ಹಣ ಮೀಸಲಿಡುವುದಷ್ಟೆ ಅಲ್ಲ. ಅನುಷ್ಠಾನ ಮಾಡುವ ಕೆಲಸವನ್ನೂ ನಾವು ಮಾಡುತ್ತಿದ್ದೇವೆ. ಕೇವಲ ಬಜೆಟ್ ಘೋಷಣೆಯಲ್ಲಿ, ಘೋಷಣೆಗಳನ್ನು ವಾಸ್ತವದಲ್ಲಿ ಅನುಷ್ಠಾನಗೊಳಿಸುತ್ತಿರುವ ಸರ್ಕಾರ ನಮ್ಮದು ಎಂದರು.

ಎಸ್ಸಿ ಎಸ್ಟಿ ಗುತ್ತಿಗೆ ಮೊತ್ತವನ್ನು 1 ಕೊಟಿ ರೂ.ಗೆ ಹೆಚ್ಚಳ ಮಾಡಲಾಗುವುದು. ಸಾಮಾಜಿಕ ವಲಯ, ಮೂಲ ಸೌಕರ್ಯ, ಆರ್ಥಿಕ ನಿರ್ವಹಣೆ ಚೆನ್ನಾಗಿ ಮಾಡಿದ್ದೇವೆ‌. ಜಿಎಸ್ ಟಿ ಜಾರಿಯಾಗುವ ಮುಂಚಿನ ಪ್ರಕರಣಗಳಿಗೆ ಒಂದೇ ಬಾರಿ ಸೆಟಲ್ ಮೆಂಟ್ ಮಾಡಿಕೊಳ್ಳಲು ಪ್ರೀ ಜಿಎಸ್ ಟಿ ರೆಜಿಮ್ ಗೆ ಅವಕಾಶ ನೀಡಲಾಗಿದೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ ಮಾನವ ಮೂಲಭೂತ ಸೌಕರ್ಯಗಳಾದ ಶಾಲಾ ಆಸ್ಪತ್ರೆಗಳು, ಮಕ್ಕಳ ಪೌಷ್ಠಿಕ ಆಹಾರ ಮತ್ತು ದೊಡ್ಡ ಪ್ರಮಾಣ ಮೂಲಭೂತಸೌಕರ್ಯಗಳಾದ ರೈಲ್ವೆ, ರಸ್ತೆ, ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಗಳು, ಕೈಗಾರಿಕೆ ಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!