April 2, 2026
Thursday, April 2, 2026
spot_img

ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ, ಚಿಂತಿಸಬೇಡಿ: ಇರಾನ್ ನಿಂದ ಸಿಕ್ಕಿತು ‘ಹಾರ್ಮುಜ್‌ ಜಲಸಂಧಿ’ ಮುಕ್ತ ಅಭಯ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮದ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆಯೂ ಭಾರತದ ಹಡಗುಗಳು ಹಾರ್ಮುಜ್‌ ಜಲಸಂಧಿಯನ್ನು ದಾಟಿ ಸುರಕ್ಷಿತವಾಗಿ ಬರುತ್ತಿದ್ದು, ಈ ಮಧ್ಯೆ ಇರಾನ್‌, ಭಾರತೀಯರ ಆತಂಕ ದೂರ ಮಾಡಿದೆ.

ಈಗಾಗಲೇ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಅಭಾವ ಹೆಚ್ಚಾಗಿದ್ದು, ಅನೇಕ ರಾಷ್ಟ್ರಗಳಿಗೆ ಹಾರ್ಮುಜ್‌ ಜಲಸಂಧಿ ಪ್ರವೇಶ ನಿರ್ಬಂಧ ವಿದ್ದು,ಆದರೆ ಭಾರತೀಯ ಸ್ನೇಹಿತರು ಈ ಕುರಿತು ಚಿಂತಿಸುವ ಅಗತ್ಯವಿಲ್ಲ ಎಂದು ಇರಾನ್‌ ಭರವಸೆ ನೀಡಿದೆ.

ಈ ಕುರಿತು ಪೋಸ್ಟ್ ಮಾಡಿದ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ, ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದು, ಚಿಂತಿಸುವ ಅಗತ್ಯವಿಲ್ಲ ಎಂದು ತಿಳಿಸಿದೆ.

ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತಿದ್ದು, ಭಾರತ, ಚೀನಾ, ರಷ್ಯಾ, ಇರಾಕ್ ಸಹಿತ ಸ್ನೇಹಪರ ರಾಷ್ಟ್ರಗಳಿಗೆ ಮಾತ್ರ ದಾಟಲು ಅವಕಾಶ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !