August 27, 2026
Thursday, August 27, 2026
spot_img

ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಆಮ್ ಆದ್ಮಿ ಪಾರ್ಟಿ: ರಾಜ್ಯಸಭೆ ಉಪನಾಯಕ ಸ್ಥಾನದಿಂದ ಕೊಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯಸಭಾ ಸಂಸದ ರಾಘವ್ ಚಡ್ಡಾಗೆ ಆಮ್ ಆದ್ಮಿ ಪಕ್ಷ ಶಾಕ್ ನೀಡಿದ್ದು, ರಾಜ್ಯಸಭೆಯ ಉಪನಾಯಕ ನಾಯಕ ಸ್ಥಾನದಿಂದ ವಜಾಗೊಳಿಸಿದೆ.

ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದ ಪಕ್ಷ , ಈ ಬದಲಾವಣೆಯನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿದೆ. ಜೊತೆಗೆ ರಾಘವ್ ಚಡ್ಡಾ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನಿಗದಿಪಡಿಸದಂತೆ ಕೇಳಿಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ರಾಘವ್ ಚಡ್ಡಾ ಪಕ್ಷಾತೀತವಾಗಿ ಜನರ ಸಮಸ್ಯೆಗಳನ್ನು ಧ್ವನಿ ಎತ್ತುತ್ತಿದ್ದರು. ಇದರ ಜೊತೆಗೆ ಪಾರ್ಟಿ ಸಿದ್ದಂತಾದ ವಿರುದ್ಧ ನಡೆದುಕೊಳ್ಳುತ್ತಿದ್ದರು ಎಂಬ ಮಾತುಗಳು ಕೇಳಿಬಂದಿತ್ತು.

ಅದರಲ್ಲೂ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಪ್ರಮುಖ ನಾಯಕರು ಸಮಸ್ಯೆಯಲ್ಲಿ ಸಿಲುಕಿದ್ದ ವೇಳೆ ಪಕ್ಷದ ಪರ ನಿಲ್ಲಲಿಲ್ಲ . ಕೇಂದ್ರದ ಯೋಜನೆಗಳನ್ನು ವಿರೋಧಿಸುತ್ತಿರಲಿಲ್ಲ. ಹೀಗಾಗಿ ರಾಘವ್ ಚಡ್ಡಾ ನಡೆಯಿಂದ ಆಪ್ ಕೆರಳಿ ಕೆಂಡಾಮಂಡಲವಾಗಿದೆ ಎಂಬ ಮಾತುಗಳ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಡೆಪ್ಯೂಟಿ ನಾಯಕ ಸ್ಥಾನದಿಂದ ರಾಘವ್ ಚಡ್ಡಾ ಕಿತ್ತು ಹಾಕಿದ ಆಮ್ ಆದ್ಮಿ ಪಾರ್ಟಿ, ಆ ಸ್ಥಾನಕ್ಕೆ ಸಂಸದ ಅಶೋಕ್ ಮಿತ್ತಲ್ ಹೆಸರನ್ನು ನಾಮನಿರ್ದೇಶಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !