ಹೊಸ ದಿಗಂತ ವರದಿ, ಹುಬ್ಬಳ್ಳಿ:
ಬಿಜೆಪಿಯ ಕಾರ್ಯಕರ್ತರಿಗೆ ಅಧಿಕಾರ ಅಹಂಕಾರ ಅಲ್ಲ, ಅದು ಸೇವೆ. ಅದಕ್ಕೆ ಪ್ರಧಾನಿ ಮೋದಿ ಹೇಳುತ್ತಾರೆ ನಾನು ಪ್ರಧಾನಿಯಲ್ಲ . ಪ್ರಧಾನ ಸೇವಕ ಎನ್ನುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು ಹೇಳಿದರು.
ಶುಕ್ರವಾರ ಇಲ್ಲಿಯ ಭೈರಿದೇವರಕೊಪ್ಪದ ಈಶ್ವರಿ ವಿಶ್ವವಿದ್ಯಾಲಯ ಆವರಣದಲ್ಲಿ ಬಿಜೆಪಿ ಮಹಾನಗರ ಪಾಲಿಕೆಯ ಸದಸ್ಯರ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಹಿರಿಯರು ಆದರ್ಶಗಳ ಬೆಳೆಸಿದರು ಅದರ ಮುಖಾಂತರ ಬೆಳೆದರು ಎಂದು ಹೇಳಿದರು. ಅಧಿಕಾರ ಚಲಾವಣೆ ಅಲ್ಲ ಪರಿವರ್ತನೆಗೊಸ್ಕರ. ಎರಡು ಬಾರಿ ಲೋಕ ಸಭಾ ಚುನಾವಣೆಯಲ್ಲಿ ಅವಕಾಶ ಸಿಕ್ಕಿವೆ ಅದರ ಜತೆ ಪರಿವರ್ತನೆ ಸಹ ಆಗಿದೆ. ನಮ್ಮ ಗುರಿ ಭಾರತ ವಿಶ್ವ ಗುರು ಮಾಡುವುದು. ಇದು ನಮ್ಮ ಏಕೈಕ ಗುರಿಯಾಗಿದೆ ಎಂದರು.
ಜನಸಂಘದಿಂದ ಬಿಜೆಪಿ ಜಗತ್ತಿನ ದೊಡ್ಡ ಪಕ್ಷವಾಗಿದೆ. ಅಂದಿನಿಂದ ಇಲ್ಲಿಯರೆಗೆ ಪಕ್ಷ ಸಿದ್ಧಾಂತ ಹಾಗೂ ಕಾರ್ಯ ಪದ್ದತಿಯಲ್ಲಿ ರಾಜಿಮಾಡಿಕೊಂಡಿಲ್ಲ. ಕಾರ್ಯ ಪದ್ದತಿ ಒಂದು ಸಾಧನ ಅಭ್ಯಾಸ ವರ್ಗವಾಗಿದೆ. ಕೇವಲ ಎರಡು ಸ್ಥಾನದಿಂದ ಅತೀ ದೊಡ್ಡ ಪಕ್ಷದ ವರೆಗೆ ಕಾರ್ಯ ಪದ್ದತಿ ನಮ್ಮನ್ನು ಬೆಳೆಸಿದೆ. ಕಾರ್ಯ ಪದ್ದತಿಯಲ್ಲಿ ಅಭ್ಯಾಸ ವರ್ಗ, ಶಿಸ್ತು ಹಾಗೂ ಅನುಶಾಸನ ಕಾರ್ಯ ವಿಸ್ತಾರಕ್ಕೆ, ಕಾರ್ಯಕರ್ತರಿಗೆ ಪ್ರೇರಣೆ ನೀಡಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ಸಿ. ನಾಗೇಶ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ನಂದೀಶ ರೆಡ್ಡಿ, ಶ್ರೀಕಾಂತ ಕುಲಕಣಿ, ಕೆ.ಎಸ್. ನವೀನಕುಮಾರ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಗ್ರಾಮಾಂತರ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳ ಮಠ, ದತ್ತಮೂರ್ತಿ ಕುಲಕರ್ಣಿ ಇದ್ದರು. ರಾಜ್ಯದ 7 ಮಹಾನಗರ ಪಾಲಿಕೆ ಬಿಜೆಪಿಯ 197 ಸದಸ್ಯರಿಗೆ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ್ದಾರೆ.