Tuesday, March 28, 2023

Latest Posts

ನಮ್ಮದು ‘ವಸುದೈವ ಕುಟುಂಬಕಂ’ ನೀತಿ, ಭಾರತ ಮಾನವೀಯತೆಗಾಗಿ ಶಾಶ್ವತವಾಗಿ ನಿಂತಿದೆ: ಜೈಶಂಕರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ಭೂಕಂಪನಕ್ಕೆ ತತ್ತರಿಸುವ ದಕ್ಷಿಣ ಟರ್ಕಿ ಮತ್ತು ಸಿರಿಯಾಗೆ ಅನೇಕ ದೇಶಗಳು ನೆರವಿನ ಹಸ್ತ ಚಾಚಿದ್ದು, ಭಾರತವು ‘ಆಪರೇಷನ್ ದೋಸ್ತ್‘ (Operation Dost) ಅಡಿಯಲ್ಲಿ ಟರ್ಕಿಗೆ ಪಾರುಗಾಣಿಕಾ ತಂಡಗಳನ್ನು ಕಳುಹಿಸುತ್ತಿದೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಆಪರೇಷನ್ ದೋಸ್ತ್ ಅಡಿಯಲ್ಲಿ ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಕ್ಕೆ ಭಾರತವುಔಷಧಗಳು, ರಕ್ಷಣಾ ತಂಡಗಳನ್ನು ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಬುಧವಾರ ಟ್ವೀಟ್ ಮಾಡಿದ್ದಾರೆ.

ಪ್ರತಿದಿನ ನಾವು ಭೌಗೋಳಿಕ ರಾಜಕೀಯ ಪರಿಸ್ಥಿತಿಗಳಲ್ಲಿ ಏರಿಳಿತಗಳನ್ನು ನೋಡುತ್ತೇವೆ ಆದರೆ ಭಾರತವು ಜಗತ್ತಿನ ದೇಶಗಳೊಂದಿಗೆ ಸ್ಥಿರ ಸಂಬಂಧವನ್ನು ಹೊಂದಿದೆ. ನಮ್ಮ ‘ವಸುದೈವ ಕುಟುಂಬಕಂ’ ನೀತಿಯ ಪ್ರಕಾರ ಭಾರತವು ಮಾನವೀಯತೆಗಾಗಿ ಶಾಶ್ವತವಾಗಿ ನಿಂತಿದೆ ಎಂದು ಜೈಶಂಕರ್ ಹೇಳಿದ್ದಾರೆ.

ಈಗಾಗಲೇ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವವರನ್ನು ಹೊರ ತೆಗೆಯಲಾಗುತ್ತಿದೆ. ಚಳಿಯಲ್ಲಿಅನೇಕರು ಸಾವನ್ನಪ್ಪಿದ್ದಾರೆ,. ಇನ್ನೂ ಕೆಲವು ಕಡೆ ದೊಡ್ಡ ದೊಡ್ಡ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಕಾರಣ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!