Saturday, April 1, 2023

Latest Posts

ಇಂಗ್ಲಿಷ್ ನಲ್ಲೂ ಸಿದ್ಧವಾಯಿತು ಕಾಂತಾರ: ಓಟಿಟಿಯಲ್ಲಿ ಆಗುತ್ತೆ ರಿಲೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲೇ ಛಾಪು ಮೂಡಿಸಿರುವ ಸಿನಿಮಾ ‘ಕಾಂತಾರ’ ಇದೀಗ ಇಂಗ್ಲಿಷ್ ನಲ್ಲೂ ಸಿದ್ಧವಾಗಿದೆ. ಈಗಾಗಲೇ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ರಿಲೀಸ್ ಆಗಿದ್ದು, ಈಗ ಇಂಗ್ಲಿಷ್ ನಲ್ಲೂ ಚಿತ್ರವನ್ನು ಡಬ್ ಮಾಡಲಾಗಿದೆ.

ಮಾರ್ಚ್ 1 ರಿಂದ ಓಟಿಟಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ.

ಕಡಿಮೆ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ನಾಲ್ಕುನೂರಕ್ಕೂ ಅಧಿಕ ಕೋಟಿ ಹಣವನ್ನು ಗಳಿಸಿದೆ. ನೂರು ದಿನಗಳ ಪ್ರದರ್ಶನ ಕಂಡಿದೆ. ಹಲವು ಭಾಷೆಗಳಲ್ಲಿ ಡಬ್ ಆಗಿ, ಯಶಸ್ವಿ ಪ್ರದರ್ಶನ ಕಂಡಿದೆ. ಈಗ ಇಂಗ್ಲಿಷಿನವರಿಗೂ ಈ ಸಿನಿಮಾವನ್ನು ತೋರಿಸಲು ನೆಟ್ ಫ್ಲಿಕ್ಸ್ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ ಮೊದಲ ವಾರದಲ್ಲೇ ನೋಡಲು ಲಭ್ಯವಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!