October 9, 2026
Friday, October 9, 2026
spot_img

ಸರ್ಪ್ರೈಸ್‌ ಕೊಟ್ಟ ಸ್ಪೆಷಲ್‌ ಮಗು ನಮ್ಮದು, ಜೀವನ ಬಂದಂತೆ ಸ್ವೀಕರಿಸಿ ಎಂದ ನಟಿ ಸಮಂತಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ಸಮಂತಾ ತಮ್ಮ ಎರಡನೇ ಮದುವೆಯಲ್ಲಿ ಜೀವನದ ಖುಷಿಯನ್ನು ಕಂಡುಕೊಂಡಿದ್ದಾರೆ. ರಾಜ್‌ ಜೊತೆ ಮದುವೆಯಾದ ನಂತರ ಮಗು ಆದರೂ ಒಕೆ, ಮಗು ಬೇಡ ಅಂದ್ರೂ ಒಕೆ ಎನ್ನುವ ಮೈಂಡ್‌ಸೆಟ್‌ನಲ್ಲಿದ್ದೆ. ನಮ್ಮ ಮಗು ನಮಗೆ ಸರ್ಪ್ರೈಸ್‌ ಕೊಟ್ಟಿದೆ. ಈ ಮಕ್ಕಳು ದೇವರಿಂದ ಸ್ಪೆಷಲ್‌ ಪರ್ಮಿಷನ್‌ ತೆಗೆದುಕೊಂಡು ಬಂದಿರುತ್ತಾರೆ. ಜೀವನದ ಬಹುದೊಡ್ಡ ಬದಲಾವಣೆಗೆ ತಯಾರಿದ್ದೀನಿ ಎಂದು ನಟಿ ಸಮಂತಾ ಹೇಳಿಕೊಂಡಿದ್ದಾರೆ.

ಈಗೆಲ್ಲಾ ಪ್ಲಾನ್‌ ಇಲ್ಲದೆ ಹುಟ್ಟು ಮಕ್ಕಳ ಬಗ್ಗೆ ಪೋಷಕರಿಗೆ ಡೌಟ್‌ ಇರುತ್ತದೆ. ನಮ್ಮ ಲೈಫ್‌ಗೆ ಈಗ ಮಗು ಬೇಕಾ ಬೇಡವಾ ಎನ್ನುವ ಅನುಮಾನ, ಗೊಂದಲ ಇರುತ್ತದೆ. ಆದರೆ ಪ್ಲಾನ್‌ ಇಲ್ಲದೆ ಹುಟ್ಟುವ ಮಕ್ಕಳು ತುಂಬಾನೇ ಸ್ಪೆಷಲ್‌. ನಾನು ಹಾಗೂ ರಾಜ್‌ ಮಗುವನ್ನು ನಿರೀಕ್ಷೆ ಮಾಡಿಯೇ ಇರಲಿಲ್ಲ. ನಮಗೂ ಇದು ಶಾಕ್‌ ಹಾಗೂ ಸರ್‌ಪ್ರೈಸ್‌. ಲೈಫ್‌ ಕೊಟ್ಟ ಸಿಹಿ ಗಿಫ್ಟ್‌ನ್ನು ಎರಡೂ ಕೈಯಿಂದ ಅಪ್ಪಿದ್ದೇವೆ, ಕಂದನನ್ನು ಮೀಟ್‌ ಮಾಡಲು ದಿನಗಳನ್ನು ಎಣಿಸುತ್ತಿದ್ದೇನೆ ಎಂದು ಸಮಂತಾ ಹೇಳಿಕೊಂಡಿದ್ದಾರೆ.

ರಾಜ್‌ ನನಗೆ ಸಿಕ್ಕಿದ ನಂತರ ನನ್ನ ಲೈಫ್‌ನಲ್ಲಿ ನೆಮ್ಮದಿ ಬಂದಿತ್ತು. ಅದೇ ನನಗೆ ಸಾಕಾಗಿತ್ತು. ಇಬ್ಬರಿಗೂ ಎಲ್ಲ ವಿಷಯಗಳಲ್ಲಿ ಹೇಗಾದ್ರೂ ಒಕೆ ಎನ್ನುವ ಮನೋಭಾವ ಇಟ್ಟುಕೊಂಡಿದ್ದೆವು. ಮಾ ಇಂಟಿ ಬಂಗಾರಂ ಸಿನಿಮಾದ ಥಸ್ಸಡೀಯ ಹಾಡಿನ ಶೂಟಿಂಗ್‌ ಮೊದಲ ದಿನ ನಾನು ಪ್ರೆಗ್ನೆಂಟ್‌ ಅನ್ನೋದು ಗೊತ್ತಾಯ್ತು. ಅದರಲ್ಲಿ ಸಿಕ್ಕಾಪಟ್ಟೆ ಡ್ಯಾನ್ಸ್‌ ಸ್ಟೆಪ್ಸ್‌ ಇತ್ತು. ಮಾರ್ನಿಂಗ್‌ ಸಿಕ್‌ನೆಸ್‌ ಬೇರೆ ಆರಂಭವಾಗಿತ್ತು. ಆ ದಿನ ಹೇಗೆ ಕಳೆದೆನೋ ಗೊತ್ತೇ ಇಲ್ಲ. ಈಗ ಜೀವನದಲ್ಲಿ ಯಾವ ಸಮಯಕ್ಕೆ ಏನನ್ನು ಕೊಡಬೇಕು ಅನ್ನೋದು ದೇವರಿಗೆ ಗೊತ್ತಿದೆ. ಅಂತೆಯೇ ಆಗುತ್ತಿದೆ. ನಾನು ಸಿಕ್ಕಾಪಟ್ಟೆ ಎಂಜಾಯ್‌ ಮಾಡ್ತಾ ಇದ್ದೀನಿ. ಲೈಫ್‌ ಬದಲಾಗಿಬಿಡುತ್ತದೆ ಎಂದು ಎಲ್ಲರೂ ಹೇಳ್ತಿದ್ದಾರೆ. ಆ ಬದಲಾವಣೆಗೆ ನಾನು ತಯಾರಿದ್ದೇನೆ ಎಂದಿದ್ದಾರೆ.

ದೇವರು ಪ್ರಸಾದದ ರೂಪದಲ್ಲಿ ಕೊಡುವ ಮಕ್ಕಳನ್ನು ಮಿಸ್‌ ಮಾಡಿಕೊಳ್ಳಬೇಡಿ. ಮೇಲಿರುವವನ ಪ್ಲಾನ್‌ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದಾರೆ.

Must Read