ನಿಯಂತ್ರಣ ತಪ್ಪಿ ಫುಟ್​​ಪಾತ್ ನಲ್ಲಿದ್ದ ಮಕ್ಕಳ ಮೇಲೆ ಹರಿದ ಕಾರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ದೆಹಲಿಯ ಗುಲಾಬಿ ಬಾಗ್‌ನ ಲೀಲಾವತಿ ಶಾಲೆಯ ಬಳಿ ನಿಯಂತ್ರಣ ಕಳೆದುಕೊಂಡ ಕಾರು ಮೂವರು ಮಕ್ಕಳ ಮೇಲೆ ಹರಿದ ನಂತರ ಫುಟ್‌ಪಾತ್‌ಗೆ ಡಿಕ್ಕಿಹೊಡೆದ ಘಟನೆ ನಡೆದಿದೆ.

ಮಕ್ಕಳು ಫುಟ್‌ಪಾತ್‌ ಬದಿಯಲ್ಲಿ ಚಳಿ ಕಾಯಿಸುತ್ತಿದ್ದ ವೇಳೆ ಕಾರು ಬಂದು ನುಗ್ಗಿದೆ. ಈ ಘಟನೆಯ ದೃಶ್ಯಗಳನ್ನು ಸಿಸಿಟಿವಿಯಲ್ಲಿ ಸೆರೆಯಾಗಿದೆ.

https://twitter.com/ANI/status/1604412938374086657?ref_src=twsrc%5Etfw%7Ctwcamp%5Etweetembed%7Ctwterm%5E1604412938374086657%7Ctwgr%5E9ed60deda19b015bb8313b7af12f06341557e262%7Ctwcon%5Es1_&ref_url=https%3A%2F%2Ftv9kannada.com%2Fnational%2Fspeeding-car-hits-three-children-in-gulabi-bagh-area-in-delhi-see-cctv-video-clip-rak-au33-487305.html

ಇಂದು (ಭಾನುವಾರ) ಬೆಳಿಗ್ಗೆ 9 ಗಂಟೆಗೆ ಸಂಭವಿಸಿದ ಅಪಘಾತದ ನಂತರ ಸ್ಥಳೀಯರು ಕಾರು ಚಾಲಕ ಪ್ರತಾಪ್ ನಗರದ ನಿವಾಸಿ ಗಜೇಂದ್ರ ಎಂಬಾತನಿಗೆ ಥಳಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. 10 ಮತ್ತು 4 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಆದರೆ ಅಪಾಯದಿಂದ ಪಾರಾಗಿದ್ದಾರೆ.ಇನ್ನೊಂದು 6 ವರ್ಷದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತವನ್ನು ಕಣ್ಣಾರೆ ಕಂಡ ಸ್ಥಳೀಯರೊಬ್ಬರು ಯಾರೋ ಡ್ರೈವಿಂಗ್ ಕಲಿಯುತ್ತಿದ್ದವರು ಕಾರು ಚಲಾಯಿಸಿದ್ದಾರೆ. ಚಾಲಕ ಮದ್ಯ ಸೇವಿಸಿದ್ದ. ಈ ಪ್ರದೇಶದಲ್ಲಿ ಶಾಲೆ ಇದೆ ಎಂದು ಸ್ಥಳೀಯರು ಎಚ್ಚರಿಸಿದರೂ ನಿಲ್ಲಿಸಲಿಲ್ಲ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!