ಅಧಿಕಾರಸ್ಥರ ಎಡವಟ್ಟಿಗೆ ಜನರ ಆಕ್ರೋಶ: ಹಳಿಯಾಳದ ಬೀದಿನಾಯಿಗಳು ಯಲ್ಲಾಪುರ ಪೇಟೆಗೆ

ಹೊಸದಿಗಂತ ವರದಿ ಯಲ್ಲಾಪುರ:

ಹಳಿಯಾಳ ಪಟ್ಟಣದಲ್ಲಿ ಬೀದಿ ನಾಯಿಗಳನ್ನು ಯಲ್ಲಾಪುರ ಪಟ್ಟಣದ ಸಮೀಪ ಹಳಿಯಾಳ ಕ್ರಾಸ್ ಬಳಿ ಗುರುವಾರ ಹಳಿಯಾಳ ಪುರಸಭೆಯ ಕಾರ್ಮಿಕರು ತಂದು ಬಿಟ್ಟಿದ್ದಾರೆ.
ಸುಮಾರು 80 ರಿಂದ 100 ರಷ್ಟು ಬೀದಿ ನಾಯಿಗಳನ್ನು ಟಾಟಾ ಎಸ್ ವಾಹನದಲ್ಲಿ ತುಂಬಿಸಿಕೊಂಡು ರಾಷ್ಟ್ರೀಯ ಹೆದ್ದಾರಿ ಹಳಿಯಾಳ ಕ್ರಾಸ್ ಸಮೀಪದ ಒಳ ರಸ್ತೆಯಲ್ಲಿ ಬಿಟ್ಟು ತೆರಳಿದ್ದಾರೆ. ಈ ಕುರಿತು ಹಳಿಯಾಳದಲ್ಲಿ ಬೀದಿನಾಯಿಗಳನ್ನು ಹಿಂಸಾತ್ಮಕವಾಗಿ ಅರಣ್ಯಕ್ಕೆ ಸ್ಥಳಾಂತರ ಮಾಡಿರುವ ಪುರಸಭೆ ವಿರುದ್ಧ ಹಲವಾರು ಜನ ದೂರು ದಾಖಲಿಸಿದ್ದಾರೆ.

ಹಳಿಯಾಳ ಪಟ್ಟಣದ ಬೀದಿನಾಯಿಗಳನ್ನು ಕಾಡಿನಲ್ಲಿ ಬಿಟ್ಟಿರುವ ಕುರಿತು ಹಳಿಯಾಳ ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿಗಳು ಪುರಸಭೆಗೆ ಅತ್ಯಂತ ಕ್ರೂರವಾಗಿ ನಾಯಿಗಳನ್ನು ಅರಣ್ಯಕ್ಕೆ‌ ಸಾಗಿಸಿರುವ ಕುರಿತು ಸ್ಪಷ್ಟನೆ‌‌ ಕೇಳಿ ನೋಟಿಸ್ ಜಾರಿ‌ ಮಾಡಿದ್ದಾರೆ.

ಹಿಂಸಾತ್ಮಕವಾಗಿ ನಾಯಿಗಳ ಸಾಗಾಟ:
ನಾಯಿಯನ್ನು ಹಿಡಿದು ಅದನ್ನು ಸಾಗಿಸುವ ಗುತ್ತಿಗೆ ಪಡೆದವರು, ಸುಮಾರು 10 ನಾಯಿಗಳನ್ನಷ್ಟೆ ಸಾಗಿಸಬಹುದಾಗಿದ್ದ ಟಾಟಾ ಏಸ್ ವಾಹನದಲ್ಲಿ 80 ರಿಂದ 100 ನಾಯಿಗಳನ್ನು ಹಿಂಸಾತ್ಮಕವಾಗಿ ಹಳಿಯಾಳದಿಂದ ಯಲ್ಲಾಪುರ ಪಟ್ಟಣದ ಅಂಚಿಗೆ ತಂದು ಸುರುವಿದ್ದಾರೆ. ಅದರಲ್ಲಿ ಕೆಲವು ನಾಯಿಗಳು ರೋಗಗ್ರಸ್ತವಾಗಿದ್ದು ಇನ್ನೂ ಕೆಲವು ನಾಯಿಗಳು ಆರೋಗ್ಯಕರವಾಗಿದ್ದ ಸಾಕಿದ ನಾಯಿಗಳಂತೆ ಕಂಡುಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!