ಬೋಸ್ನೀಯಾದಲ್ಲಿ ತೀವ್ರ ಭೂಕಂಪ: ಒಬ್ಬ ಮಹಿಳೆ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೊಸ್ನಿಯಾದಲ್ಲಿ ರಾತ್ರಿ 11 ಗಂಟೆಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಎರಡು ಮಂದಿ ಗಾಯಗೊಂಡಿದ್ದು ನೂರಾರು ಜನರು ಮನೆ ಬಿಟ್ಟು ಪಲಾಯನಗೈದಿದ್ದಾರೆ.

ಮೋಸ್ಟರ್‌ ನಗರದ ಆಗ್ನೇಯ ಭಾಗದಿಂದ 42 ಕಿ.ಮಿ.ಯಲ್ಲಿ ಭೂಕಂಪ ಸಂಭವಿಸಿದ್ದು 5.7 ತೀವ್ರತೆಯನ್ನು ದಾಖಲಿಸಿದೆ. ಭೂಕಂಪವು 5 ಕಿ.ಮಿ. ಆಳದಲ್ಲಿ ಕಂಡುಬಂದಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಹೇಳಿದೆ. ಸೋಲಾಕ್‌ ನಗರದಲ್ಲಿ ಬಂಡೆಯೊಂದು ಒಡೆದು ಮನೆಗೆ ಅಪ್ಪಳಿಸಿದ ಪರಿಣಾಮವಾಗಿ 28 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು ಅವಳ ಪೋಷಕರಿಗೆ ಗಾಯಗಳಾಗಿವೆ.

ಭೂಕಂಪವು ದೇಶದಾದ್ಯಂತ ಹಾಗೂ ನೆರೆಯ ಕ್ರೊಯೇಷಿಯಾ, ಸೆರ್ಬಿಯಾ ಮತ್ತು ಮಾಂಟೆನೆಗ್ರೊಗಳಲ್ಲಿ ಅನುಭವಕ್ಕೆ ಬಂದಿದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!