ಗೇಮಿಂಗ್‌ ಅನ್ನೇ ವೃತ್ತಿಯಾಗಿ ಪರಿಗಣಿಸೋಕೆ ಉತ್ಸುಕರು ಭಾರತದ ಯುವ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿನ ಯುವಸಮೂಹ ಗೇಮಿಂಗ್‌ ಪ್ರವೃತ್ತಿಯನ್ನು ಕೇವಲ ಮನರಂಜನೆಯ ಸಾಧನವಾಗಿ ಮಾತ್ರವಲ್ಲದೆ, ವೃತ್ತಿಜೀವನದ ಆಯ್ಕೆಯನ್ನಾಗಿಸಿಕೊಂಡಿದ್ದಾರೆ ಎಂದು ಹೆಚ್‌ಪಿ ಇಂಡಿಯಾ ಗೇಮಿಂಗ್ ಲ್ಯಾಂಡ್‌ಸ್ಕೇಪ್ ಅಧ್ಯಯನದಲ್ಲಿ ಬಹಿರಂಗವಾಗಿದೆ.

ಈ ಅಧ್ಯಯನದ ಪ್ರಕಾರ, 2022ಕ್ಕೆ ಹೋಲಿಸಿದರೆ ಈ ವರ್ಷ ಗೇಮ್‌ ಆಡುವ ಆಟಗಾರರ ಆದಾಯ ಸ್ಥಿರವಾಗಿ ಹೆಚ್ಚಿರುವುದರಿಂದ 52 ಪ್ರತಿಶತದಷ್ಟು ಭಾರತೀಯ ಗೇಮರುಗಳು, ಗೇಮಿಂಗ್ ಅನ್ನೇ ತಮ್ಮ ವೃತ್ತಿಯಾಗಿ ಪರಿಗಣಿಸೋಕೆ ಉತ್ಸುಕರಾಗಿದ್ದಾರೆ.

2023ರಲ್ಲಿ ಸುಮಾರು ಶೇಕಡಾ 40ರಷ್ಟು ಗೇಮರುಗಳು ವಾರ್ಷಿಕವಾಗಿ ರೂ 6,00,000 -12,00,000 ಗಳಿಸುವುದಾಗಿ ಹೇಳಿಕೊಂಡಿದ್ದಾರೆ. ಪ್ರಾಯೋಜಕತ್ವಗಳು ಮತ್ತು ಇ-ಸ್ಪೋರ್ಟ್ಸ್ ಪಂದ್ಯಾವಳಿಗಳು ಗಮನಾರ್ಹ ಆದಾಯದ ಮೂಲಗಳಾಗಿವೆ ಎಂದು ಅಧ್ಯಯನ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!