ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮಗುಚಿ 63ಮಂದಿ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೆನೆಗಲ್‌ನಿಂದ ವಲಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮುಳುಗಿ 63ಮಂದಿ ನೀರುಪಾಲಾದ ಭೀಕರ ಘಟನೆ ಅಟ್ಲಾಂಟಿಕ್‌ ಮಹಾಸಾಗರದ ಕೇಪ್ ವರ್ಡೆ ಕರಾವಳಿಯಲ್ಲಿ ನಡೆದಿದೆ. ಈ ದುರಂತದಲ್ಲಿ 38 ನಿರಾಶ್ರಿತರು ಮತ್ತು ವಲಸಿಗರನ್ನು ರಕ್ಷಿಸಲಾಗಿದೆ. ಇಂಟರ್ನ್ಯಾಷನಲ್ ಆರ್ಗನೈಸೇಶನ್ ಫಾರ್ ಮೈಗ್ರೇಷನ್ (IOM) ಹೇಳುವಂತೆ ಕೇಪ್ ವರ್ಡೆಯಲ್ಲಿ ದೋಣಿ ಮುಳುಗಡೆ ಅವಘಡದಲ್ಲಿ 63 ಜನ ಸಾನವನ್ನಪ್ಪಿದ್ದಾರೆಂದು ಖಚಿತಪಡಿಸಿದರು.

ಬೋಟ್ ಜುಲೈ 10 ರಂದು 101 ಪ್ರಯಾಣಿಕರೊಂದಿಗೆ ಸೆನೆಗಲ್‌ನಿಂದ ಹೊರಟಿತ್ತು. ಬುಧವಾರ ಸಮುದ್ರದಲ್ಲಿ 7 ಮೃತದೇಹಗಳು ಪತ್ತೆಯಾಗಿವೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ. ಸಾಲ್ ದ್ವೀಪದಿಂದ ಸುಮಾರು 320 ಕಿಲೋಮೀಟರ್ ದೂರದಲ್ಲಿ ಸ್ಪ್ಯಾನಿಷ್ ಮೀನುಗಾರಿಕಾ ದೋಣಿಯು ಹಡಗನ್ನು ನೋಡಿದೆ. ಬದುಕುಳಿದವರಲ್ಲಿ ಒಬ್ಬರು ಗಿನಿಯಾ-ಬಿಸ್ಸೌ ಮೂಲದವರು. ಏಳು ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅಗತ್ಯವಿದೆ ಎಂದು ಸಾಲ್‌ನಲ್ಲಿರುವ ಆರೋಗ್ಯ ಅಧಿಕಾರಿ ಹೇಳಿದ್ದಾರೆ.

ಕೇಪ್ ವರ್ಡೆ ಸ್ಪ್ಯಾನಿಷ್ ಕ್ಯಾನರಿ ದ್ವೀಪಗಳ ಸಮುದ್ರ ಮಾರ್ಗದಲ್ಲಿದೆ. ಪ್ರತಿ ವರ್ಷ ಸಾವಿರಾರು ನಿರಾಶ್ರಿತರು ಮತ್ತು ವಲಸಿಗರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಅಪಾಯಕಾರಿ ಪ್ರಯಾಣವನ್ನು ಮಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!