ಕಿಡಿಗೇಡಿಗಳಿಂದ ಭತ್ತದ ಬಣವೆಗೆ ಬೆಂಕಿ: ಕಣ್ಣೀರಿಟ್ಟ ರೈತ

ಹೊಸ ದಿಗಂತ ವರದಿ,ಬೇಲೂರು:

ಕಿಡಗೇಡಿಗಳು ಭತ್ತದ ಬಣವೆಗೆ ಬೆಂಕಿ ಹಾಕಿದ್ದು ಸುಮಾರು ನಾಲ್ಕು ಲಕ್ಷ ರೂ‌ ಮೌಲ್ಯದ ಭತ್ತದ ಬೆಳೆ ನಾಶವಾಗಿರುವ ಘಟನೆ
ತಾಲ್ಲೂಕಿನ, ಜಗಬೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ರೇವಯ್ಯ ಎಂಬುವವರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಬೆಂಕಿಗೆ ಆಹುತಿಯಾಗಿದ್ದು ಅಪಾರ ನಷ್ಟ ಸಂಭವಿಸಿದೆ.

ಕಷ್ಟಪಟ್ಟು ಕಾಡಾನೆಗಳಿಂದ ಭತ್ತದ ಬೆಳೆ ರಕ್ಷಿಸಿಕೊಂಡಿದ್ದ ರೈತ ರೇವಯ್ಯ ಎರಡು ದಿನಗಳಿಂದ ಭತ್ತ ಕಟಾವು ಮಾಡಿ ಬವಣೆ ಹಾಕಿದ್ದರು .ರಾತ್ರಿ ಭತ್ತದ ಬಣವೆಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದು ಭತ್ತದ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ ಕೈ ಬಂದು ತುತ್ತನ್ನು ಬಾಯಿಗೆ ಬಂದಿಲ್ಲ . ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತ ‌ ಮನವಿ‌ ಮಾಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!