ಪಹಲ್ಗಾಮ್‌ ಅಟ್ಯಾಕ್‌ ಎಫೆಕ್ಟ್‌: ಪಾಕ್ ನಟನ ‘ಅಬೀರ್ ಗುಲಾಲ್’ ಚಿತ್ರದ ಸಾಂಗ್ಸ್ ಡಿಲೀಟ್ ಮಾಡಿದ ಯೂಟ್ಯೂಬ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಚಿತ್ರ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಈ ಚಿತ್ರದ ಹಾಡುಗಳನ್ನು ಯೂಟ್ಯೂಬ್ ತೆಗೆದು ಹಾಕಿದೆ. ಈ ಮೂಲಕ ಚಿತ್ರತಂಡಕ್ಕೆ ಯೂಟ್ಯೂಬ್ ಶಾಕ್ ಕೊಟ್ಟಿದೆ.

ಪಾಕ್ ನಟ ಫವಾದ್ ನಟನೆಯ ‘ಅಬೀರ್ ಗುಲಾಲ್’ ಚಿತ್ರದ 2 ಹಾಡುಗಳು ಯೂಟ್ಯೂಬ್‌ನಲ್ಲಿತ್ತು. ಒಂದು ರೊಮ್ಯಾಂಟಿಕ್ ಸಾಂಗ್ ಮತ್ತೊಂದು ಪಾರ್ಟಿ ಸಾಂಗ್ ಆಗಿತ್ತು. ಈ ಎರಡು ಹಾಡನ್ನು ಈಗ ಯೂಟ್ಯೂಬ್ ತೆಗೆದು ಹಾಕಿದೆ. ಇದು ಚಿತ್ರತಂಡಕ್ಕೆ ಭಾರೀ ಹಿನ್ನೆಡೆ ಆಗಿದೆ.

ಜಮ್ಮು ಮತ್ತು ಕಾಶ್ಮೀರ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿನ್ನೆಲೆ ಪಾಕಿಸ್ತಾನಿ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ರಿಲೀಸ್ ಮಾಡಲು ಅನುಮತಿ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here