Monday, September 25, 2023

Latest Posts

ಚಂದ್ರಯಾನ ಮಿಷನ್‌ “ಐತಿಹಾಸಿಕ ಕ್ಷಣ” ಎಂದು ಪ್ರಶಂಸಿಸಿದ ಪಾಕ್‌ ಮಾಜಿ ಸಚಿವ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಮಾಜಿ ಮಾಹಿತಿ ಮತ್ತು ಪ್ರಸಾರ ಸಚಿವ ಫವಾದ್ ಚೌಧರಿ ಭಾರತದ ಚಂದ್ರಯಾನ-3 ಮಿಷನ್ ಅನ್ನು ʻಐತಿಹಾಸಿ ಕ್ಷಣʼವೆಂದು ಶ್ಲಾಘಿಸಿದ್ದಾರೆ. ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಪಾಕ್‌ ಸರ್ಕಾರ ನೇರ ಪ್ರಸಾರ ಮಾಡಬೇಕು ಎಂದು ಸಲಹೆ ನೀಡಿದರು. ಭಾರತೀಯ ವಿಜ್ಞಾನಿಗಳು ಮತ್ತು ಬಾಹ್ಯಾಕಾಶ ಸಮುದಾಯವನ್ನು ಅಭಿನಂದಿಸಿದ ಅವರು, ಈ ಕಾರ್ಯಾಚರಣೆ ಮನುಕುಲಕ್ಕೆ ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.

“ಪಾಕ್ ಮಾಧ್ಯಮಗಳು #Chandrayanmoonlanding ಅನ್ನು ಸಂಜೆ 6:15 ಕ್ಕೆ ನೇರಪ್ರಸಾರ ಮಾಡಬೇಕು” ಎಂದು ಫವಾದ್ ಟ್ವಿಟ್ಟರ್‌ ಮೂಲಕ ಮನವಿ ಮಾಡಿದರು.

2019 ರಲ್ಲಿ ಚಂದ್ರಯಾನ-2 ಮಿಷನ್ ವಿಫಲವಾಗಿದ್ದಕ್ಕೆ ಪಾಕಿಸ್ತಾನದ ಮಾಜಿ ಸಚಿವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಟ್ರೋಲ್ ಮಾಡಿದ್ದರು. ಟ್ರೋಲ್‌ ಮಾಡಿದವರೇ ಇಂದು ಮತ್ತೆ ಭಾರತವನ್ನು ಹೊಗಳುವಂತೆ ಮಾಡಿದ ಕೀರ್ತಿ ಇಸ್ರೋ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!