ತೆರೆಗೆ ಬರಲಿದೆ ಪಾಕ್ ಎಕ್ಸ್ ಪ್ರೆಸ್ ಶೋಯೆಬ್ ಅಖ್ತರ್ ಬಯೋಪಿಕ್ ಸಿನಿಮಾ: ಹೀರೋ ಆಗಿ ಈತ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಿನಿಮಾ ರಂಗದಲ್ಲೀಗ ಜೀವನಾಧಾರಿತ ಬಯೋಪಿಕ್ ಚಿತ್ರಗಳು ಹೆಚ್ಚು ಹೆಚ್ಚು ಮೂಡಿಬರುತ್ತಿದ್ದು, ಭಾರತದಲ್ಲಿ ಈಗಾಗಲೇ ಹಲವು ಕ್ರೀಡಾ ಪಟುಗಳ ಬಯೋಪಿಕ್ ತೆರೆ ಮೇಲೆ ಬಂದಿದ್ದು, ಇದೀಗ ಪಾಕಿಸ್ತಾನದಲ್ಲು ಬಯೋಪಿಕ್ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

ಪಾಕಿಸ್ತಾನದ ವೇಗದ ಬೌಲರ್ ಶೋಯೆಬ್ ಅಖ್ತರ್ ಜೀವನಾಧಾರಿತ ಸಿನಿಮಾವೊಂದು ತಯಾರಾಗಲಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಶೋಯೆಬ್ ಅಖ್ತರ್ ಪಾತ್ರವನ್ನು ಗಾಯಕ ಮತ್ತು ನಟ ಉಮರ್ ಜಸ್ವಾಲ್ ನಿರ್ವಹಿಸಲಿದ್ದಾರೆ.

ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉಮರ್ ಮಾಹಿತಿ ನೀಡಿದ್ದಾರೆ. ಪೋಸ್ಟರ್‌ನಲ್ಲಿ, ಅವರು ಶೋಯೆಬ್ ಅವರ ಜರ್ಸಿ ಸಂಖ್ಯೆ 14 ಅನ್ನು ಧರಿಸಿದ್ದು, ಚಿತ್ರಕ್ಕೆ ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದೆ.

ಶೋಯೆಬ್ ಹುಟ್ಟಿನಿಂದ 2002ರವರೆಗಿನ ಪಯಣವನ್ನು ಈ ಚಿತ್ರದಲ್ಲಿ ತೋರಿಸಲಾಗುವುದು. ವಿವಿಧ ವಯೋಮಾನಗಳಲ್ಲಿ ಶೋಯೆಬ್ ಅವರಂತೆ ಕಾಣಲು ಉಮರ್ ತಯಾರಿ ನಡೆಸುತ್ತಿದ್ದಾರೆ.

ಈ ಚಿತ್ರದ ಶೂಟಿಂಗ್ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. ಪಾಕಿಸ್ತಾನ, ದುಬೈ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ನಡೆಯಲಿದೆ. ಈ ಪಾತ್ರವನ್ನು ನಿರ್ವಹಿಸಲು ತುಂಬಾ ಉತ್ಸುಕರಾಗಿದ್ದು, ಶೋಯೆಬ್ ಅವರ ಜೀವನ ಸ್ಫೂರ್ತಿದಾಯಕವಾಗಿದೆ. ಅವರು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ವಿಶ್ವದ ದೊಡ್ಡ ಸ್ಟಾರ್ ಎಂದು ಉಮರ್ ಹೇಳಿದ್ದಾರೆ.

ಮುಂದಿನ ವರ್ಷ ನವೆಂಬರ್ 16 ರಂದು ಚಿತ್ರ ಬಿಡುಗಡೆಯಾಗಲಿದೆ. ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಶೋಯೆಬ್ ಅಖ್ತರ್ ಈಗ ಕಾಮೆಂಟೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!