Sunday, January 29, 2023

Latest Posts

ಬಲೂಚಿಸ್ತಾನದಲ್ಲಿ ಪಾಕ್ ಸೇನಾ ಹೆಲಿಕಾಪ್ಟರ್ ಪತನ: ಪೈಲಟ್ ಸೇರಿ 6 ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಬಲೂಚಿಸ್ತಾನದಲ್ಲಿ ಪತನಗೊಂಡಿದೆ. ಅಪಘಾತದ ಸಮಯದಲ್ಲಿ ಇಬ್ಬರು ಮೇಜರ್-ಶ್ರೇಣಿಯ ಅಧಿಕಾರಿಗಳು ಮತ್ತು ಮೂವರು ವಿಶೇಷ ರಕ್ಷಣಾ ಗುಂಪು (SPG) ಕಮಾಂಡೋಗಳು ಹೆಲಿಕಾಪ್ಟರ್‍ನಲ್ಲಿದ್ದರು. ಪೈಲಟ್ಸೇರಿದಂತೆ ಎಲ್ಲರೂ ಸಾವನ್ನಪ್ಪಿದ್ದಾರೆ .
ಈ ಕುರಿತು ಪಾಕಿಸ್ತಾನದ ಪತ್ರಕರ್ತ ಮಾಹಿತಿಯನ್ನನೀಡಿದ್ದು, ‘ತುಂಬಾ ದುರದೃಷ್ಟಕರ ಮತ್ತು ದುಃಖದ ಸುದ್ದಿ. ಬಲೂಚಿಸ್ತಾನದಿಂದ ಮತ್ತೊಂದು ಹೆಲಿಕಾಪ್ಟರ್ ಅಪಘಾತ ವರದಿಯಾಗಿದೆ. ಇಬ್ಬರು ಮೇಜರ್’ಗಳು ಮತ್ತು ಮೂವರು ಎಸ್‌ಎಸ್ಜಿ ಕಮಾಂಡೋಗಳು ಸೇರಿದಂತೆ ಆರು ಜನರು ಅಪಘಾತಕ್ಕೀಡಾದ ಹೆಲಿಕಾಪ್ಟರ್’ನಲ್ಲಿದ್ದರು. ಎಲ್ಲರೂ ಸಾವನ್ನಪ್ಪಿದ್ದಾರೆ’ ಎಂದಿದ್ದಾರೆ.
ಬಲೂಚಿಸ್ತಾನ ಪ್ರಾಂತ್ಯದ ಹರ್ನೈ ಬಳಿ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಸೇನೆಯ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!