Sunday, February 5, 2023

Latest Posts

ನವರಾತ್ರಿ ಹಬ್ಬದ ಸಂಭ್ರಮಕ್ಕೆ ರೈಲ್ವೆ ಇಲಾಖೆಯಿಂದ ಬಂತು ವಿಶೇಷ ಥಾಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿನಿಂದ ಎಲ್ಲೆಡೆ ನವರಾತ್ರಿ ಹಬ್ಬದ ಸಂಭ್ರಮ. ಈ ದಸರಾ ಕ್ಷಣಕ್ಕೆ ಭಾರತೀಯ ರೈಲ್ವೆ ಇಲಾಖೆ ಕೂಡಾ ಜನರಿಗೆ ವಿಶೇಷ ಊಡುಗರೆಯನ್ನು ನೀಡುತ್ತಿದ್ದು, ಈ ಅವಧಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ವಿಶೇಷ ಊಟ ನೀಡಲು ನಿರ್ಧರಿಸಿದೆ.

ನವರಾತ್ರಿ ಹಿನ್ನೆಲೆ 9 ದಿನಗಳ ಕಾಲ ಭಾರತೀಯ ರೈಲ್ವೆಯಲ್ಲಿ ವಿಶೇಷ ಊಟದ ಮೆನು ಇರಲಿದ್ದು, ಈ ಮೂಲಕ ರೈಲಿನಲ್ಲೂ ಹಬ್ಬದ ಊಟ ಸವಿಯಬಹುದು ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ.

ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ಮಾತ್ರ ಈ ಸ್ಪೆಷಲ್ ಮೆನು ಇರಲಿದೆ ಎಂದು ಸ್ಪಷ್ಟಪಡಿಸಿದೆ.
ಫುಡ್ ಆನ್ ಟ್ರ‍್ಯಾಕ್ ಅಪ್ಲಿಕೇಶನ್, irctc.co.in ಅಥವಾ 1323 ಗೆ ಕರೆ ಮಾಡಿ ವಿಶೇಷ ಮೆನುವನ್ನು ಆರ್ಡರ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಟ್ವಿ ಟ್ವೀಟ್ ಮಾಡಿರುವ ಈ ಪ್ರಕಟಣೆಯಲ್ಲಿ ರೈಲ್ವೆ ಇಲಾಖೆ ವಿಶೇಷ ಥಾಲಿಯ ಫೋಟೋವನ್ನೂ ಲಗತ್ತಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!