ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ದಾಳಿಯ ಬೆನ್ನಲ್ಲಿಯೇ ಭಾರತ ಕೈಗೊಂಡ ರಾಜತಾಂತ್ರಿಕ ಕ್ರಮಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ತನ್ನ ಹತಾಶ ವರ್ತನೆ ತೋರಿದೆ.
ಹೌದು ಪಾಕ್ ಈಗ ಭಾರತದೊಂದಿಗೆ ಶಿಮ್ಲಾ ಒಪ್ಪಂದ ಸೇರಿ ಎಲ್ಲಾ ದ್ವಿಪಕ್ಷೀಯ ಒಪ್ಪಂದವನ್ನು ರದ್ದು ಮಾಡುವುದಾಗಿ ಹೇಳಿದ್ದು, ಹಾಗಾದರೆ ಶಿಮ್ಲಾ ಒಪ್ಪಂದ ಎಂದರೇನು? ಇಲ್ಲಿದೆ ಫುಲ್ ಡೀಟೇಲ್ಸ್.
ಶಿಮ್ಲಾ ಒಪ್ಪಂದಕ್ಕೆ 1972 ಜುಲೈ 2ರಂದು ಆಗಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕಿಸ್ತಾನದ ಜುಲ್ಫಿಕರ್ ಅಲಿ ಭುಟ್ಟೋ ಸರ್ಕಾರ ಸಹಿ ಹಾಕಿದ್ದವು. ಈ ಒಪ್ಪಂದದಡಿಯಲ್ಲಿ, ಎರಡೂ ದೇಶಗಳು ಪರಸ್ಪರ ಒಪ್ಪಿಗೆಯ ಮೂಲಕ ತಮ್ಮ ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ವಿಧಾನಗಳ ಮೂಲಕ ಮಾತುಕತೆ ಅಥವಾ ಇತರ ಶಾಂತಿಯುತ ವಿಧಾನಗಳ ಮೂಲಕ ಪರಿಹರಿಸಲು ಒಪ್ಪಿಕೊಂಡಿದ್ದವು.
ಭಾರತಕ್ಕೆ ಲಾಭ ಹೇಗೆ?: ಪಾಕಿಸ್ತಾನ ಶಿಮ್ಲಾ ಒಪ್ಪಂದವನ್ನು ರದ್ದುಗೊಳಿಸಿದರೆ, ಇದು ಭಾರತಕ್ಕೆ ಕಾಶ್ಮೀರದ ಬಗ್ಗೆ ತನ್ನ ನೀತಿಗಳನ್ನು ಮತ್ತಷ್ಟು ಬಲಪಡಿಸಲು ಸ್ವಾತಂತ್ರ್ಯವನ್ನು ನೀಡುತ್ತದೆ. ಶಿಮ್ಲಾ ಒಪ್ಪಂದವು ನಿಯಂತ್ರಣ ರೇಖೆಯನ್ನು ಶಾಶ್ವತ ಗಡಿಯಾಗಿ ಗುರುತಿಸಿದೆ. ಅದನ್ನು ರದ್ದುಗೊಳಿಸಿದರೆ, ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಹೆಚ್ಚು ಆಕ್ರಮಣಕಾರಿ ತಂತ್ರವನ್ನು ಅಳವಡಿಸಿಕೊಳ್ಳಬಹುದು. ಭಾರತವು POK ಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಬಹುದು ಅಥವಾ ಅಲ್ಲಿನ ಜನರೊಂದಿಗೆ ನೇರ ಸಂಪರ್ಕವನ್ನು ಸ್ಥಾಪಿಸಬಹುದು.