ಉಗ್ರರ ದಾಳಿ ಬಳಿಕ ಮತ್ತೆ ಬಾಲ ಬಿಚ್ಚಿದ ಪಾಪಿ ಪಾಕಿಸ್ತಾನ.. BSF ಯೋಧನ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಆಕಸ್ಮಿಕವಾಗಿ ಪಂಜಾಬ್ ಗಡಿಯನ್ನು ದಾಟಿದ ಭಾರತದ ಬಿಎಸ್‌ಎಫ್ ಯೋಧನನ್ನು ಪಾಕಿಸ್ತಾನ ರೇಂಜರ್ಸ್ ಬಂಧಿಸಿದೆ.

ಬುಧವಾರ, ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ಗೆ ಸೇರಿದ ಕಾನ್‌ಸ್ಟೇಬಲ್ ಪಿಕೆ ಸಿಂಗ್ ಎಂಬ ಯೋಧ, ಫಿರೋಝ್‌ಪುರ್‌ನ ಗಡಿಯ ಬಳಿ ಮೇಲ್ವಿಚಾರಣೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿಯನ್ನು ದಾಟಿದ್ದಾರೆ ಎನ್ನಲಾಗಿದೆ.

ಕಾನ್‌ಸ್ಟೇಬಲ್ ಪಿಕೆ ಸಿಂಗ್ ತನ್ನ ಯೂನಿಫಾರ್ಮ್‌ನಲ್ಲಿದ್ದರು ಮತ್ತು ಸರ್ವಿಸ್ ರೈಫಲ್ ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. ಅವರ ಬಿಡುಗಡೆಗಾಗಿ ಎರಡೂ ಪಡೆಗಳ ನಡುವೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!