ಪಾಕ್‌ ಹೊಸ ಜೆರ್ಸಿ ಕಲ್ಲಂಗಡಿ ಹಣ್ಣಿಂದ ಸ್ಪೂರ್ತಿ ಪಡೆದಿದ್ದಂತೆ! ಸಾಮಾಜಿಕ ತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್‌ ನಲ್ಲಿ ಬಹುತೇಕ ರಾಷ್ಟ್ರಗಳು ವಿನೂತನ ಬಗೆಯ ಜೆರ್ಸಿಯಲ್ಲಿ ಕಣಾಕ್ಕಿಳಿಯಲಿವೆ. ಇತ್ತೀಚೆಗೆ ಇಂಗ್ಲೆಂಡ್‌, ಆಸ್ಟ್ರೇಲಿಯಾಗಳು ಜೆರ್ಸಿ ಬಿಡುಗಡೆ ಮಾಡಿದ್ದವು, ಟೀಂ ಇಂಡಿಯಾ ಭಾನುವಾರ ಬಿಡುಗಡೆ ಮಾಡಿದ್ದ ಜೆರ್ಸಿ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಪಾಕ್‌ ಸರದಿ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಹೊಸ ಜೆರ್ಸಿಯೊಂದಿಗೆ ಕಾಣಿಸಿಕೊಂಡಿರುವ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ ಇದೇ ವಿಚಾರ ಇಟ್ಟುಕೊಂಡು ನೇಟಿಜನ್‌ ಗಳು ಆಡಿಕೊಂಡು ನಗುತ್ತಿದ್ದಾರೆ. ಕಾರಣ, ಪಾಕ್‌ ಹೊಸ ಜೆರ್ಸಿ ಸಂಪೂರ್ಣವಾಗಿ ಕಲ್ಲಂಗಡಿ ಹಣ್ಣಿನ ವಿನ್ಯಾಸದಲ್ಲಿದೆ!.

ಪಾಕ್‌ ಕಲ್ಲಂಗಡಿ ಹಣ್ಣಿನಿಂದ ಪ್ರೇರಣೆ ಪಡೆದು ಹೊಸ ಜೆರ್ಸಿಯನ್ನು ರೂಪಿಸಿದೆ. ಇದನ್ನು ಧರಿಸಿ ಕಣಕ್ಕಿಳಿದರೆ ಆಟಗಾರರು ಕಲ್ಲಂಗಡಿ ಹಣ್ಣಿನಂತೆ ಕಾಣುತ್ತಾರೆ ಎಂದು ಪಾಕ್‌ ಕ್ರಿಕೆಟ್‌ ಬೋರ್ಟ್‌ ಅನ್ನು ಟ್ರೋಲ್‌ ಮಾಡಲಾಗುತ್ತಿದೆ. ಕೆಲವರು ಸೆಂಟರ್‌ ಫ್ರೆಷ್‌ ಚ್ಯೂಯಿಂಗ್‌ ಗಮ್‌ ನ ಫೋಟೋ ಹಂಚಿಕೊಂಡು ಸೇಮ್‌.. ಸೇಮ್‌.. ಎಂದು ಕಾಮೆಂಟಿಸುತ್ತಿದ್ದಾರೆ.

ಟೀಂ ಇಂಡಿಯಾ ಕಿಟ್‌ಗೆ ಹೋಲಿಸಿದರೆ ಪಾಕ್‌ ಜೆರ್ಸಿ ಕಳಪೆ ವಿನ್ಯಾಸವನ್ನು ಹೊಂದಿದೆ ಎಂದು ಅಭಿಮಾನಿಗಳು ದೂರುತ್ತಿದ್ದಾರೆ. ಆದಾಗ್ಯೂ, ಹೊಸ ಕಿಟ್ ಕುರಿತು ಪಿಸಿಬಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದ್ದರಿಂದ ಅಭಿಮಾನಿಗಳ ಟೀಕೆಯಿಂದ ಎಚ್ಚತ್ತು ಜೆರ್ಸಿ ವಿನ್ಯಾಸ ಬದಲಾದರೂ ಆಗಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!