ಪಾಕಿಸ್ತಾನ : ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಪ್ರಸಾರ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಸರ್ಕಾರಿ ಸಂಸ್ಥೆಗಳ ವಿರುದ್ಧ ಮಾಡುವ ಪ್ರಚೋದನಕಾರಿ ಭಾಷಣ ಹಾಗೂ ಧ್ವನಿಮುದ್ರಿತ ಹೇಳಿಕೆಗಳನ್ನು ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವುದನ್ನು ‘ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ‘ (ಪಿಇಎಂಆರ್‌ಎ) ನಿಷೇಧಿಸಿದೆ.

ಪಿಟಿಐ ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್, ಲಾಹೋರ್‌ನಲ್ಲಿರುವ ತಮ್ಮ ಜಮಾನ್ ಪಾರ್ಕ್ ನಿವಾಸದ ಹೊರಗೆ ತಮ್ಮ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ‌‌‘ನಾನು ಎಂದಿಗೂ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಮುಂದೆ ತಲೆಬಾಗಿಲ್ಲ’ ಎಂದು ಹೇಳಿದರು.

ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ವಿದೇಶದಲ್ಲಿ ತಮ್ಮ ಸಂಪತ್ತು ಹೊಂದಿದ್ದಾರೆ ಮತ್ತು ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ (ನಿವೃತ್ತ) ಖಮರ್ ಜಾವೇದ್ ಬಜ್ವಾ ಅವರಿಗೆ ಕಾನೂನು ಪ್ರಕರಣಗಳಲ್ಲಿ ರಕ್ಷಣೆ ನೀಡಿದ್ದಾರೆ ಎಂದು ಆರೋಪಿಸಿದರು.

ತೋಷಖಾನಾ ಪ್ರಕರಣದಲ್ಲಿ ಖಾನ್ ಅವರನ್ನು ಬಂಧಿಸಲು ಇಸ್ಲಾಮಾಬಾದ್ ಪೊಲೀಸರು ಭಾನುವಾರ ಲಾಹೋರ್ ಅವರ ನಿವಾಸವನ್ನು ತಲುಪಿದ್ದರು. ಆದರೆ ಮಾರ್ಚ್ 7 ರಂದು ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಅವರ ವಕೀಲರ ತಂಡ ಭರವಸೆ ನೀಡಿದ ನಂತರ ಪೊಲೀಸರು ವಾಪಾಸಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!