Saturday, April 1, 2023

Latest Posts

ಇದೇ ಮೊದಲ ಬಾರಿಗೆ ತೃತೀಯಲಿಂಗಿಗಳ ಸರ್ವೆ ನಡೆಸಲಿದೆ ರಾಜ್ಯ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇದೇ ಮೊದಲ ಬಾರಿಗೆ ರಾಕ್ಯ ಸರ್ಕಾರ ತೃತೀಯಲಿಂಗಿಗಳ ಜನಗಣತಿ ನಡೆಸಲು ನಿರ್ಧಾರ ಮಾಡಿದೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಸರ್ವೆ ನಡೆಯಲಿದ್ದು, ಪ್ರಾಯೋಗಿಕವಾಗಿ ಮೈಸೂರು ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಸರ್ವೆ ನಡೆಸಲಾಗುತ್ತದೆ.

ಮಾರ್ಚ್10ರಿಂದ 24ರವರೆಗೆ ಸಮೀಕ್ಷೆ ನಡೆಯಲಿದ್ದು, ತೃತಿಯಲಿಂಗಿಗಳ ಅಧ್ಯಯನಕ್ಕೆ ಇದು ಸಹಾಯವಾಗಲಿದೆ. ಸಮೀಕ್ಷೆಯಿಂದ ತೃತೀಲಿಂಗಿಗಳ ಸಂಖ್ಯೆ, ಉದ್ಯೋಗ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಸ್ಥಿತಿ ತಿಳಿಯಲಾಗುತ್ತದೆ. ತದನಂತರ ಸಮುದಾಯದ ಸಬಲೀಕರಣಕ್ಕಾಗಿ ನೀತೊ ಹಾಗೂ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಸಮೀಕ್ಷೆ ನೆರವಾಗಲಿದೆ.

ತೃತೀಯಲಿಂಗಿಗಳ ಮೂಲಕವೇ ಸಮೀಕ್ಷೆ ನಡೆಸಲಾಗುವುದು, ಸಮೀಕ್ಷೆಯಮ್ಮಿ ತಾ;ಊಕು ಕೇಂದ್ರಗಳಲ್ಲಿ ನಡೆಸಲಾಗುವುದು, ನಿಗದಿತ ದಿನಾಂಕದಂದು ಹತ್ತಿರದ ಪ್ರದೇಶಗಳ ತೃತೀಯಲಿಂಗಿಗಳು ಸಮೀಕ್ಷೆಯಲ್ಲಿ ಭಾಗಿಯಾಗಬೇಕು ಎಂದು ಸರ್ಕಾರ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!